ಆಲ್ದೂರು: ಸಮೀಪದ ಕಾಲೇಜು ಗುಡ್ಡದ ಆಟದ ಮೈದಾನದಲ್ಲಿ ಪುನೀತ್ ರಾಜಕುಮಾರ್ ಸ್ಮರಣಾರ್ಥ ಎಟಿಸಿ ಕ್ರಿಕೆಟ್ ಟೂರ್ನಿ ನಡೆಯಿತು.
ಮೂರು ದಿನಗಳ ಕಾಲ ನಡೆದ ಟೂರ್ನಿಯಲ್ಲಿ ಒಟ್ಟು 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಬಾಳೆಹೊನ್ನೂರಿನ ಗಾಯಕ್ ಫ್ರೆಂಡ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕೂದುವಳ್ಳಿ ಎಸಿಟಿಕೆ (ದ್ವಿತೀಯ), ಸ್ಟಾರ್ ಬುಲ್ಸ್ ತಂಡ (ತೃತೀಯ) ಸ್ಥಾನ ಪಡೆದುಕೊಂಡಿತು.
ಗಣ್ಯರಾದ ಕೆ.ಮೂರ್ತಿ, ಪ್ರಭಾಕರ್, ಜೀವನ್.ಕೆ, ಬೆಳಗೋಡು ಮಂಜು, ಅಣ್ಣಪ್ಪ, ಕ್ರೀಡಾಕೂಟದ ಆಯೋಜಕರಾದ ಸಂದೀಪ್, ರಘು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.