ADVERTISEMENT

ಬಾಬಾಬುಡನ್ ಸ್ವಾಮಿ ದರ್ಗದಲ್ಲಿ ಗುಹೆಯೊಳಗಿನ ಗೋರಿಗೆ ಕುಂಕುಮ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 21:09 IST
Last Updated 22 ನವೆಂಬರ್ 2024, 21:09 IST
ದತ್ತಪೀಠದ ಮುಜರಾಯಿ ಇಲಾಖೆ ಕಚೇರಿ ಎದುರು ಶಾ–ಖಾದ್ರಿ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದರು
ದತ್ತಪೀಠದ ಮುಜರಾಯಿ ಇಲಾಖೆ ಕಚೇರಿ ಎದುರು ಶಾ–ಖಾದ್ರಿ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದರು   

ಚಿಕ್ಕಮಗಳೂರು: ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗದಲ್ಲಿ ಗುಹೆಯೊಳಗಿನ ಗೋರಿಯ ಮೇಲೆ ಕುಂಕುಮ ಹಚ್ಚಿ ಪೂಜೆ ಸಲ್ಲಿಸಲಾಗಿದೆ ಎಂದು ಆರೋಪಿಸಿ ಇಲ್ಲಿನ ಶಾ–ಖಾದ್ರಿ ಕುಟುಂಬದ ಸದಸ್ಯರು ಗುಹೆಯ ಎದುರಿನ ಮುಜರಾಯಿ ಇಲಾಖೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

‘ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಕೃತ್ಯಗಳನ್ನು ಕೆಲವರು ಮಾಡುತ್ತಿದ್ದು, ನಮ್ಮ ಭಾವನೆ ಘಾಸಿಗೊಳಿಸುತ್ತಿದ್ದಾರೆ. ಮುಜರಾಯಿ ಇಲಾಖೆ ಅಧಿಕಾರಿಗಳು ಇದನ್ನು ಗಮನಿಸಿದ್ದರೂ ಸುಮ್ಮನಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೆಪ್ಟೆಂಬರ್‌ನಲ್ಲೇ ಇದೇ ರೀತಿ ಗೋರಿಗಳಿಗೆ ಕುಂಕುಮ ಹಚ್ಚಿ ಪೂಜೆ ಸಲ್ಲಿಸಲಾಗಿತ್ತು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಮುದಾಯ ಮುಖಂಡರು ದೂರು ದಾಖಲಿಸಿದ್ದರು. ಈಗ ಮತ್ತೆ ಗೋರಿಗಳಿಗೆ ಕುಂಕುಮ ಹಚ್ಚಿ ಪೂಜೆ ಮಾಡಿರುವುದು ಸರಿಯಲ್ಲ. ಕುಂಕುಮ ಹಚ್ಚಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ADVERTISEMENT

‘ಶಾ–ಖಾದ್ರಿ ವಂಶಸ್ಥರು ಎಂದು ಹೇಳಿಕೊಂಡ ಗುಂಪೊಂದು ನ.19ರಂದು ದತ್ತಪೀಠದ ಆವರಣದೊಳಗೆ ನುಗ್ಗಿ ಅರ್ಚಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮಕಿ ಹಾಕಿದೆ’ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ಆರೋಪಿಸಿದ್ದಾರೆ.

ಹಿಂದೂ ಧಾರ್ಮಿಕ ಪದ್ಧತಿಯ ಪ್ರಕಾರ ಹಚ್ಚಿದ ಅರಿಶಿಣ–ಕುಂಕುಮವನ್ನು ಮುಜಾವರ್ ಮೂಲಕ ಅಳಿಸಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.