ಕೊಪ್ಪ: ತಾಲ್ಲೂಕಿನ ಗೌರಿಗದ್ದೆ ಸ್ವರ್ಣಪೀಠಿಕಾಪುರ ದತ್ತಾವಧೂತ ವಿನಯ್ ಗುರೂಜಿ ಅವರ ಅವಹೇಳನ ಮಾಡುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿನಯ್ ಗುರೂಜಿ ಭಕ್ತವೃಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿತು.
‘ವಿನಯ್ ಗುರೂಜಿ ಅವರ ಜನಪ್ರಿಯತೆಯನ್ನು ಸಹಿಸದ ಕೆಲವು ವ್ಯಕ್ತಿಗಳು ಗುರೂಜಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ವಿನಯ್ ಗುರೂಜಿ ಅವರು ಯಾವುದೇ ಸಮಾಜಕ್ಕೆ ಕೆಡುಕುಂಟು ಮಾಡುವ ಕಾರ್ಯದಲ್ಲಿ ಭಾಗಿಯಾಗಿಲ್ಲ. ಇತ್ತೀಚೆಗೆ ಕೆಲವು ಖಾಸಗಿ ದೃಶ್ಯ ಮಾಧ್ಯಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟರ್ ಗಳನ್ನು ಹಾಕಿ ಅವರ ಘನತೆಗೆ ಕುತ್ತು ತರುತ್ತಿವೆ’ ಎಂದು ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.
ಪುರಭವನದಿಂದ ಬಸ್ ನಿಲ್ದಾಣದವರೆಗೆ ನೂರಾರು ಸಂಖ್ಯೆಯಲ್ಲಿ ಭಕ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಿಎಸ್ಐ ಶ್ರೀನಾಥ್ ರೆಡ್ಡಿ ಅವರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ತಹಶೀಲ್ದಾರ್ ವಿಮಲ ಸುಪ್ರಿಯಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜೆ.ಪುಣ್ಯಪಾಲ್, ಅದ್ದಡ ಸತೀಶ್, ನಾರ್ವೆ ಅನಿಲ್ ಕುಮಾರ್, ಸುರೇಶ್ ಕಣಗಲ್, ರಮೇಶ್ ಶೆಟ್ಟಿ, ಸಂತೋಷ್ ಅರೆನೂರ್, ಸಚಿನ್ ನಂದಿಗೋಡು, ಸುಧಾಕರ್ ಕುಪ್ಪಳಿ, ಎನ್.ಕೆ.ಸತೀಶ್, ಕೂಳೂರು ಶೃಂಗೇಶ್ವರ ರಾವ್, ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.