ADVERTISEMENT

ಬಕ್ರೀದ್‍: ಮುಖಂಡರ ಸಭೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:46 IST
Last Updated 13 ಜೂನ್ 2024, 14:46 IST
ಬಕ್ರೀದ್‍ ಹಬ್ಬದ ಹಿನ್ನಲೆಯಲ್ಲಿ  ಪಟ್ಟಣದ ಎಲ್ಲಾ ಎಂಟು ಮಸೀದಿಗಳ ಪದಾಧಿಕಾರಿಗಳು ಮುಸ್ಲೀಂ ಸಮಾಜದ ಮುಖಂಡರ ಸಭೆಯನ್ನು ತರೀಕೆರೆ ಟೌನ್‍ ಪೊಲೀಸ್‍ ಠಾಣೆಯಲ್ಲಿ ಡಿವೈಎಸ್‍ಪಿ ಹಾಲಮೂರ್ತಿರಾವ್ ರವರ ನೇತೃತ್ವದಲ್ಲಿ ಶಾಂತಿ ಸಭೆ ಬುಧವಾರ ಸಂಜೆ ನಡೆಸಲಾಯಿತು.

ತರೀಕೆರೆ : ಬಕ್ರೀದ್‍ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ 8 ಮಸೀದಿಗಳ ಪದಾಧಿಕಾರಿಗಳು ಹಾಗೂ ಮುಸ್ಲಿಂ ಮುಖಂಡರ ಸಭೆ ತರೀಕೆರೆ  ಪೊಲೀಸ್‍ ಠಾಣೆಯಲ್ಲಿ ಡಿವೈಎಸ್‍ಪಿ ಹಾಲಮೂರ್ತಿರಾವ್ ಅವರ ನೇತೃತ್ವದಲ್ಲಿ ಈಚೆಗೆ ನಡೆಯಿತು.

ಇದೇ 17ರಂದು ಬಕ್ರೀದ್‍ ಆಚರಿಸಲಾಗುವುದು. ಅಂದು ನಡೆಯುವ ಧಾರ್ಮಿಕ ಕಾರ್ಯಗಳ ರೂಪುರೇಷೆಗಳನ್ನು ಎಲ್ಲ ಮಸೀದಿಗಳ ಮುಖಂಡರ ಸಭೆ ನಡೆಸಿದ ನಂತರ ನೀಡುವುದಾಗಿ ಮುಖಂಡರು ತಿಳಿಸಿದರು.

ಇನ್‌ಸ್ಪೆಕ್ಟರ್ ಸಂತೋಷ್‍ ಶೆಟ್ಟಿ, ಸಬ್‍ ಇನ್‌ಸ್ಪೆಕ್ಟರ್ ಕೃಷ್ಣ ನಾಯ್ಕ, ಕ್ರೈಂ ಸಬ್‍ ಇನ್‌ಸ್ಪೆಕ್ಟರ್ ನಾಗೇಂದ್ರ ನಾಯ್ಕ, ಮುಖಂಡರಾದ ಅಮ್ಜದ್, ಆದಿಲ್ ಪಾಷ, ಅಪ್ರೋಜ್, ಕಮರ್ ಪಾಷ, ಎಜಾಜ್, ಫಾರೂಕ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.