ADVERTISEMENT

‘ವಿವಿಧ ಭಾಷೆಗಳಲ್ಲಿ ಬ್ಯಾರಿ ಪದಗಳು ಮಿಳಿತ’– ಬಿ.ಎಂ.ಹನೀಫ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 4:45 IST
Last Updated 15 ಜೂನ್ 2022, 4:45 IST
ಚಿಕ್ಕಮಗಳೂರು ತಾಲ್ಲೂಕಿನ ಮಾಗಡಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಬಿ.ಎಂ.ಹನೀಫ್ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಮುಖಂಡ ಕೆ.ಮಹಮ್ಮದ್ ಇದ್ದರು.
ಚಿಕ್ಕಮಗಳೂರು ತಾಲ್ಲೂಕಿನ ಮಾಗಡಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಬಿ.ಎಂ.ಹನೀಫ್ ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಮುಖಂಡ ಕೆ.ಮಹಮ್ಮದ್ ಇದ್ದರು.   

ಚಿಕ್ಕಮಗಳೂರು: 'ಬ್ಯಾರಿ ಭಾಷೆಗೆ 1300 ವರ್ಷಗಳ ಇತಿಹಾಸ ಇದೆ.ರಾಜ್ಯದ ವಿವಿಧ ಸಮುದಾಯಗಳಭಾಷೆಗಳಲ್ಲಿ ಬ್ಯಾರಿ ಪದಗಳನ್ನು ಬಳಸುತ್ತಾರೆ' ಎಂದು ಪತ್ರಕರ್ತ ಬಿ.ಎಂ.ಹನೀಫ್ ಹೇಳಿದರು.

ತಾಲ್ಲೂಕಿನ ಮಾಗಡಿಯಲ್ಲಿ ಮಂಗಳವಾರ ಆಯೋಜಿಸಿದ್ದ ಚಿಕ್ಕಮಗಳೂರು ಜಿಲ್ಲಾ ಬ್ಯಾರಿ ಒಕ್ಕೂಟದ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. 'ರಾಜ್ಯದಲ್ಲಿ ಬ್ಯಾರಿ ಸಮುದಾಯದ 15 ಲಕ್ಷ ಮಂದಿ ಇದ್ದಾರೆ. ಅವರದೇ ವಿಶೇಷ ಸಂಸ್ಕೃತಿ ಹೊಂದಿದ್ದಾರೆ. ಬ್ಯಾರಿ ಸಮುದಾಯದವರು ಕನ್ನಡ ಕಾದಂಬರಿ, ಕಥೆ ರಚನೆಯಲ್ಲಿ ಛಾಪು ಮೂಡಿಸಿದ್ದಾರೆ' ಎಂದು ಹೇಳಿದರು.

ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ ಮಾತನಾಡಿ, ‘ಭಾಷೆ ನಾಶವಾದರೆ, ಸಂಸ್ಕೃತಿ ನಾಶವಾದಂತೆ. ಬ್ಯಾರಿ
ಭಾಷೆ ಹಾಗೂ ಸಮುದಾಯದ ಅಭಿವೃದ್ಧಿಗೆ ಒಗ್ಗೂಡಬೇಕು’ ಎಂದು ಹೇಳಿದರು.

ADVERTISEMENT

ಮುಖಂಡ ಕೆ.ಮಹಮ್ಮದ್ ಮಾತನಾಡಿ, ಬ್ಯಾರಿ ಸಮುದಾಯದವರು ಸಂಘಟಿತರಾಗಬೇಕು. ಗೊಂದಲಗಳಿಗೆ ಕಿವಿಗೊಡಬಾರದು ಎಂದು ಹೇಳಿದರು.

ಒಕ್ಕೂಟದ ಉಪಾಧ್ಯಕ್ಷರಾದ ಫಾರೂಕ್, ಟಿ.ಎಂ.ನಾಸೀರ್, ಬಿ.ಎಸ್.ಮಹಮ್ಮದ್, ಕಾರ್ಯದರ್ಶಿ ಅಲ್ತಾಫ್, ಸದಸ್ಯರಾದ ಮೊಹಿಯುದ್ದೀನ್, ಅಬೂಬಕ್ಕರ್, ವಾಹೀದ್ ಅಹಮದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.