ADVERTISEMENT

ಕೊಪ್ಪ| ಕೆಳಗಿನಬೈಲು ಹಳ್ಳಿಗೆ ಅಂಬೇಡ್ಕರ್ ಭವನ ಮಂಜೂರುಗೊಳಿಸಲು ಭೀಮ್ ಆರ್ಮಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜೂನ್ 2023, 10:56 IST
Last Updated 18 ಜೂನ್ 2023, 10:56 IST
ಕೊಪ್ಪ ತಾಲ್ಲೂಕಿನ ಸೋಮ್ಲಾಪುರ ಗ್ರಾಮದ ಕೆಳಗಿನಬೈಲಿನಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ಆಗ್ರಹಿಸಿ ಭೀಮ್ ಆರ್ಮಿ ಸಂಘಟನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು
ಕೊಪ್ಪ ತಾಲ್ಲೂಕಿನ ಸೋಮ್ಲಾಪುರ ಗ್ರಾಮದ ಕೆಳಗಿನಬೈಲಿನಲ್ಲಿ ಅಂಬೇಡ್ಕರ್ ಭವನ ನಿರ್ಮಿಸುವಂತೆ ಆಗ್ರಹಿಸಿ ಭೀಮ್ ಆರ್ಮಿ ಸಂಘಟನೆಯ ಕಾರ್ಯಕರ್ತರು ಮನವಿ ಸಲ್ಲಿಸಿದರು   

ಕೊಪ್ಪ: ತಾಲ್ಲೂಕಿನ ಸೋಮ್ಲಾಪುರ ಗ್ರಾಮದ ಕೆಳಗಿನಬೈಲು ಎಂಬ ಹಳ್ಳಿಗೆ ಅಂಬೇಡ್ಕರ್ ಭವನ ಮಂಜೂರು ಮಾಡಿಕೊಡುವಂತೆ ಆಗ್ರಹಿಸಿ ಭೀಮ್ ಆರ್ಮಿ ಸಂಘಟನೆಯ ಕಾರ್ಯಕರ್ತರು ತಾಲ್ಲೂಕು ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

‘ಕೆಳಗಿನಬೈಲಿನಲ್ಲಿ ಸುಮಾರು 20 ಪರಿಶಿಷ್ಟ ಕುಟುಂಬಗಳು ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದ ಗಿರಿಜನ ಕುಟುಂಬಗಳು ವಾಸವಾಗಿವೆ. ಇಲ್ಲಿನ ನಿವಾಸಿಗಳ ಉಪಯೋಗಕ್ಕೆ ಸರ್ಕಾರ ಸಮುದಾಯ ಭವನವಾಗಲಿ, ಅಂಬೇಡ್ಕರ್ ಭವನವನ್ನಾಗಲಿ ನಿರ್ಮಿಸಿಲ್ಲ. ಇದರಿಂದ ಯಾವುದೇ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಭೀಮ್ ಆರ್ಮಿ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸುಧಾಕರ್, ಶೃಂಗೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಅಣ್ಣು, ತಾಲ್ಲೂಕು ಕಾರ್ಯಾಧ್ಯಕ್ಷರಾದ ಶ್ರೀಧರ್, ಷರೀಫ್, ಕಾರ್ಯದರ್ಶಿ ಸೋಮ್ಲಾಪುರದ ಪ್ರಸಾದ್, ಸಾಮಾಜಿಕ ಹೋರಾಟಗಾರ ನೀಲಗುಳಿ ಪದ್ಮನಾಭ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.