ADVERTISEMENT

ಕಳಸ: ಕಾಡುಕೋಣ ತಿವಿದು ಕೃಷಿಕನಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 12:49 IST
Last Updated 14 ಜೂನ್ 2024, 12:49 IST
ಕಳಸ ಸಮೀಪದ ಅಬ್ರುಗುಡಿಗೆ ಪ್ರದೇಶದಲ್ಲಿ ಶುಕ್ರವಾರ ಕಾಡುಕೋಣ ದಾಳಿಯಿಂದ ಗಾಯಗೊಂಡ ವಿಶ್ವನಾಥ ಭಟ್ ಅವರನ್ನು ಚಿಕಿತ್ಸೆಗೆ ಮಂಗಳೂರಿಗೆ ಕಳಿಸುತ್ತಿರುವುದು.
ಕಳಸ ಸಮೀಪದ ಅಬ್ರುಗುಡಿಗೆ ಪ್ರದೇಶದಲ್ಲಿ ಶುಕ್ರವಾರ ಕಾಡುಕೋಣ ದಾಳಿಯಿಂದ ಗಾಯಗೊಂಡ ವಿಶ್ವನಾಥ ಭಟ್ ಅವರನ್ನು ಚಿಕಿತ್ಸೆಗೆ ಮಂಗಳೂರಿಗೆ ಕಳಿಸುತ್ತಿರುವುದು.   

ಕಳಸ: ಸುಂಕಸಾಲೆ ಸಮೀಪದ ಅಬ್ರುಗುಡಿಗೆ ಪ್ರದೇಶದಲ್ಲಿ ಕಾಡುಕೋಣ ತಿವಿದು ಕೃಷಿಕರೊಬ್ಬರಿಗೆ ಗಂಭೀರ ಗಾಯವಾಗಿವೆ.

ಆನಂಬಿ ಎಂಬಲ್ಲಿ ಹುಲ್ಲು ಕೊಯ್ಯುತ್ತಿದ್ದಾಗ ವಿಶ್ವನಾಥ ಭಟ್ (60) ಅವರ ಮೇಲೆ ಕಾಡು ಕೋಣ ಏಕಾಏಕಿ ದಾಳಿ ನಡೆಸಿದೆ. ಕೋಣದ ತಿವಿತದಿಂದ ವಿಶ್ವನಾಥ್‌ ಅವರ ಎದೆಯ ಬಲಭಾಗದಲ್ಲಿ ಆಳವಾದ ಗಾಯವಾಗಿದೆ. ಅವರ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ವಿಶ್ವನಾಥ್‌ ಅವರಿಗೆ ಕಳಸದ ಕಾವೇರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ. ಅಬ್ರುಗುಡಿಗೆ ಪ್ರದೇಶದಲ್ಲಿ ಕಾಡು ಕೋಣಗಳ ಹಾವಳಿ ಹೆಚ್ಚಿರುವ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಗಾಯಗೊಂಡ ವಿಶ್ವನಾಥ ಭಟ್ ಅವರಿಗೆ ಸೂಕ್ತ ಪರಿಹಾರ ಮತ್ತು ಚಿಕಿತ್ಸೆ ಕೊಡಿಸಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.