ADVERTISEMENT

ಮುಖ್ಯಮಂತ್ರಿ ಆಗಬೇಕೆಂದು ಗಡ್ಡಬಿಟ್ಟಿದ್ದಲ್ಲ, ಅದು ನನ್ನ ಐಡೆಂಟಿಟಿ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 10:39 IST
Last Updated 1 ಆಗಸ್ಟ್ 2021, 10:39 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಮುಖ್ಯಮಂತ್ರಿ ಆಗಬೇಕು ಎಂಬ ಕಾರಣಕ್ಕೆ ನಾನು ಗಡ್ಡಬಿಟ್ಟಿದ್ದಲ್ಲ, ಕಾಲೇಜು ದಿನಗಳಿಂದಲೂ ನಿರಂತರವಾಗಿ ಗಡ್ಡಬಿಟ್ಟಿದ್ದೇನೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಜಯನಗರ ಮೈಲಾರಲಿಂಗರ ಭವಿಷ್ಯದ ಬಗ್ಗೆ ಗೊತ್ತಿಲ್ಲ. ಅವರು ಹೇಳಿರುವುದು ನಿಜವಾದರೆ ಮುಖ್ಯಮಂತ್ರಿ ಆಗುವ ಆಕಾಂಕ್ಷೆ ಇರುವವರೆಲ್ಲರೂ ಗಡ್ಡ ಬಿಡಲು ಪ್ರಾರಂಭಿಸಬಹುದು’ ಎಂದು ಉತ್ತರಿಸಿದರು.

‘ಗಡ್ಡ , ಹಣೆಗೆ ತಿಲಕ, ಕಿವಿಗೆ ಟಿಕ್ಕಿ (ಮುರ), ನನ್ನ ಐಡೆಂಟಿಟಿ ಭಾಗ. ದೂರದಿಂದಲೇ ಸಿ.ಟಿ.ರವಿ ಎಂದು ಗುರುತಿಸಿ ಹೇಳುವುದಕ್ಕೆ ಐಡೆಂಟಿಟಿ ಅದು. ನಾನು ಯಾವಾಗಲೂ ಪಕ್ಷ ನಿಷ್ಠೆ, ಪರಿಶ್ರಮದ ಮೇಲೆ ವಿಶ್ವಾಸ ಇಟ್ಟಿದ್ದೇನೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.