ಕೊಪ್ಪ: ‘ಬ್ರಾಹ್ಮಣ ಅಡುಗೆ ಕಾರ್ಮಿಕರಿಗೆ ಆರ್ಥಿಕವಾಗಿ ಅಥವಾ ಇನ್ನಿತರೆ ಯಾವುದೇ ಸಂದರ್ಭದಲ್ಲಿ ಸಮಸ್ಯೆಯಾದಾಗ ಅವರಿಗೆ ಸಂಘ ನೆರವಾಗಬೇಕು. ಅಡುಗೆ ಕಾರ್ಮಿಕರ ಸಂಘದೊಂದಿಗೆ ಬ್ರಾಹ್ಮಣ ಮಹಾಸಭಾ ಇರುತ್ತದೆ’ ಎಂದು ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೃಷ್ಣಮೂರ್ತಿ ಹೇಳಿದರು.
ಇಲ್ಲಿನ ಗಾಯತ್ರಿ ಮಂದಿರದಲ್ಲಿ ಈಚೆಗೆ ನಡೆದ ತಾಲ್ಲೂಕು ಬ್ರಾಹ್ಮಣ ಅಡುಗೆ ಕಾರ್ಮಿಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಡುಗೆ ಹಾಗೂ ಪುರೋಹಿತ ವೃತ್ತಿಯಲ್ಲಿ ಬ್ರಾಹ್ಮಣರನ್ನು ಗುರುತಿಸಲಾಗುತ್ತಿದ್ದು, ನಮ್ಮ ಸಮಾಜಕ್ಕೆ ಹೆಮ್ಮೆ ತರುತ್ತಿದ್ದಾರೆ. ಬ್ರಾಹ್ಮಣ ಅಡುಗೆಯವರಿಗೆ ಅವಹೇಳನಕಾರಿ ಮಾತುಗಳು ಬಂದಾಗ, ಸಂಘ ಅವರಿಗೆ ಬೆಂಬಲವಾಗಿ ನಿಲ್ಲಬೇಕು’ ಎಂದರು.
ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ ಕೇಂದ್ರ ಸಮಿತಿಯ ಅಧ್ಯಕ್ಷ ವಿಜಯರಂಗ ಮಾತನಾಡಿ, ‘ಅಡುಗೆ ಉತ್ತಮ ಕಲೆ ಎಂದು ಹೇಳಬಹುದು. ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಉತ್ತಮ ಊಟದ ವ್ಯವಸ್ಥೆ ಇರಬೇಕು. ಅತಿಥಿಗಳನ್ನು ತೃಪ್ತಿಪಡಿಸುವಲ್ಲಿ ಪರಿಶ್ರಮ ವಿಶೇಷವಾದದ್ದು’ ಎಂದರು.
ತಾಲೂಕು ಬ್ರಾಹ್ಮಣ ಅಡುಗೆ ಕಾರ್ಮಿಕ ಸಂಘದ ಅಧ್ಯಕ್ಷ ಜೇಡಿಕೆರೆ ರಾಘವೇಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಅಡುಗೆ ಗುತ್ತಿಗೆದಾರ ಗೋಪಾಲಕೃಷ್ಣ ಭಟ್ ಕಾರ್ಯಕ್ರಮ ಉದ್ಘಾಟಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಪ್ರ ವೇದಿಕೆ ತಾಲ್ಲೂಕು ಸಂಚಾಲಕಿ ಶ್ರೀಮತಿ ನಾಗರಾಜ್, ತಾಲ್ಲೂಕು ಬ್ರಾಹ್ಮಣ ಮಹಾಸಭಾ ನಿರ್ದೇಶಕ ಅನಿತಾ ಚಂದ್ರಶೇಖರ್, ವಕೀಲ ನವೀನ್ ರಾವ್, ಸಂಘದ ಉಪಾಧ್ಯಕ್ಷರಾದ ಅರ್ಜುನ್ ಕಲ್ಕೆರೆ, ರಮಾನಂದ ಹಿರೇಹಡ್ಲು, ರಾಜು ನಿಲುವಾಗಿಲು, ಕಾರ್ಯದರ್ಶಿ ನಾಗರಂಜನ್, ಖಜಾಂಚಿ ದಿನರಾಜ್ ಗಾಡಿಕೆರೆ, ಸಹ ಖಜಾಂಚಿ ರಾಘವೇಂದ್ರ ಹೂಗೆಬೈಲು, ಪ್ರದೀಪ್ ಹೆಬ್ಬಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.