ADVERTISEMENT

ಚಾರ್ಮಾಡಿ ಘಾಟ್‌: ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸ್ವಚ್ಛತಾ ಕಾರ್ಯ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 6:20 IST
Last Updated 26 ಜುಲೈ 2022, 6:20 IST
ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಶೌರ್ಯ ರಾಷ್ಟ್ರೀಯ ವಿಪತ್ತು ತಂಡದಿಂದ ಸ್ವಚ್ಛತಾ ಕಾರ್ಯ ನಡೆಯಿತು.
ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ ಶೌರ್ಯ ರಾಷ್ಟ್ರೀಯ ವಿಪತ್ತು ತಂಡದಿಂದ ಸ್ವಚ್ಛತಾ ಕಾರ್ಯ ನಡೆಯಿತು.   

ಕೊಟ್ಟಿಗೆಹಾರ: ‘ಪ್ರವಾಸಿ ತಾಣಗಳಿಗೆ ಬರುವವರು ಸ್ವಚ್ಛತೆ ಕಾಪಾಡುವ ಮೂಲಕ ಜಬಾಬ್ದಾರಿ ಮೆರೆಯಬೇಕಿದೆ’ ಎಂದು ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಕಸಬಾ ವಲಯದ ಸಂಯೋಜಕ ಪ್ರವೀಣ್ ಪೂಜಾರಿ ಹೇಳಿದರು.

ಚಾರ್ಮಾಡಿ ಘಾಟ್‌ನಲ್ಲಿ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರಾಷ್ಟ್ರೀಯ ಹೆದ್ದಾರಿಯು ಚಾರ್ಮಾಡಿ ಘಾಟ್ ಮೂಲಕ ಹಾದು ಹೋಗಿದ್ದು, ಪ್ರವಾಸಿಗರು ಎಲ್ಲೆಂದರಲ್ಲಿ ಎಸೆದಿರುವ ಪ್ಲಾಸ್ಟಿಕ್ ತ್ಯಾಜ್ಯಗಳು ಅರಣ್ಯ ಸೇರುತ್ತಿವೆ. ಸಾರ್ವಜನಿಕವಾಗಿ ಕಸದ ಡಬ್ಬ ಇಟ್ಟಿದ್ದರೂ ಜನರು ಬಳಸುವುದಿಲ್ಲ. ಸ್ವಚ್ಛತೆ ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು’ ಎಂದರು.

ADVERTISEMENT

ಚಾರ್ಮಾಡಿ ಘಾಟ್‍ನ ಇಕ್ಕೆಲಗಳಲ್ಲಿ ರಾಶಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ತಟ್ಟೆ, ಚೀಲಗಳು ಮುಂತಾದ ವಸ್ತುಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.

ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಾಗರ್, ರವಿ ಪೂಜಾರಿ, ಗಣೇಶ್, ಪ್ರಕಾಶ್, ಪ್ರತಾಪ್, ಶಶಿ, ಅಶ್ವತ್, ಹರೀಶ್, ಸುನಿಲ್, ಕಿಶೋರ್, ಸಂತೋಷ್, ಅಶ್ವಿನ್, ಉಮೇಶ್, ರಘು, ಅಶ್ವಿನ್, ಸಚಿನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.