ADVERTISEMENT

ಕೊಟ್ಟಿಗೆಹಾರ: ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಬಿಗಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 13:21 IST
Last Updated 21 ಮಾರ್ಚ್ 2024, 13:21 IST
ಕೊಟ್ಟಿಗೆಹಾರದ ಚೆಕ್ ಪೋಸ್ಟ್ ನಲ್ಲಿ ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ತಪಾಸಣೆ ವೇಳೆ ದಾಖಲೆ ರಹಿತ ರೂ 1ಲಕ್ಷ ಹಣ ಅಧಿಕಾರಿಗಳು ಸೀಜ್ ಮಾಡಿರುವುದು
ಕೊಟ್ಟಿಗೆಹಾರದ ಚೆಕ್ ಪೋಸ್ಟ್ ನಲ್ಲಿ ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ತಪಾಸಣೆ ವೇಳೆ ದಾಖಲೆ ರಹಿತ ರೂ 1ಲಕ್ಷ ಹಣ ಅಧಿಕಾರಿಗಳು ಸೀಜ್ ಮಾಡಿರುವುದು   

ಕೊಟ್ಟಿಗೆಹಾರ: ತಾಲ್ಲೂಕಿನ ಕೊಟ್ಟಿಗೆಹಾರ, ಬಾಳೂರು, ಕೊಲ್ಲಿಬೈಲ್, ಕಸ್ಕೇಬೈಲ್, ಕಿರುಗುಂದ, ಜನ್ನಾಪುರ ಚೆಕ್‌ಪೋಸ್ಟ್‌ಗಳಲ್ಲಿ  ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಎಲ್ಲ ವಾಹನಗಳನ್ನು ಬಿಗಿ ತಪಾಸಣೆಗೆ ಒಳಪಡಿಸುತ್ತಿದ್ದಾರೆ.

ಅಧಿಕಾರಿಗಳ ತಂಡದ ಮುಖ್ಯಸ್ಥ ಶಿವಕುಮಾರ್ ಮಾತನಾಡಿ ‘ಕೊಟ್ಟಿಗೆಹಾರದ ಚೆಕ್ ಪೋಸ್ಟ್‌ನಲ್ಲಿ ಮೂರು ಪಾಳಿಯಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿ ಜತೆಗೆ ಪ್ರವಾಸಿಗರು, ಸಾರ್ವಜನಿಕರು ಸಹಕರಿಸಬೇಕು' ಎಂದರು.

ಬಣಕಲ್ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ ಕೌಶಿಕ್, ಎನ್.ಕೆ.ಓಮನ, ಸಿಬ್ಬಂದಿ ಜಗದೀಶ್, ನವೀನ್, ವರ್ಷಿಣಿ, ಹೋಂ ಗಾರ್ಡ್ ಚೇತನ್, ಬಿ.ಎಸ್.ಮರುಳಸಿದ್ದಪ್ಪ, ಯಶವಂತರಾಜ್, ಗಿರೀಶ್ ಇದ್ದರು.

ADVERTISEMENT
ಕೊಟ್ಟಿಗೆಹಾರದ ಚೆಕ್ ಪೋಸ್ಟ್ ನಲ್ಲಿ ಲೋಕ ಸಭೆ ಚುನಾವಣೆ ಹಿನ್ನಲೆಯಲ್ಲಿ ಕರ್ತವ್ಯ ನಿರತ ಅಧಿಕಾರಿಗಳು ವಾಹನಗಳ ಬಿಗಿ ತಪಾಸಣೆ ನಡೆಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.