ADVERTISEMENT

ಗೋಣಿಬೀಡು: ಜೇಸಿಐ ಹೊಯ್ಸಳ ಘಟಕ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 8:16 IST
Last Updated 17 ಜನವರಿ 2023, 8:16 IST
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡಿನಲ್ಲಿ ನಡೆದ ಜೇಸಿಐ ಹೊಯ್ಸಳ ಘಟಕದ ಪದಗ್ರಹಣ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡಿನಲ್ಲಿ ನಡೆದ ಜೇಸಿಐ ಹೊಯ್ಸಳ ಘಟಕದ ಪದಗ್ರಹಣ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.   

ಮೂಡಿಗೆರೆ: ಮಾನವನಲ್ಲಿ ಸಮಾಜಮುಖಿ ಚಿಂತನೆಗಳಿರಬೇಕು. ವ್ಯಕ್ತಿಯಲ್ಲಿ ಸಮಾಜಮುಖಿ ಚಿಂತನೆಯಿದ್ದರೆ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಜೇಸಿಐ ವಲಯಾಧ್ಯಕ್ಷೆ ಯಶಸ್ವಿನಿ ಹೇಳಿದರು.

ತಾಲ್ಲೂಕಿನ ಗೋಣಿಬೀಡು ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಜೇಸಿಐ ಹೊಯ್ಸಳ ಘಟಕದ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವೈಯಕ್ತಿಕವಾಗಿ ಸಾಧಿಸಲು ಅಸಾಧ್ಯವಾಗಿದ್ದನ್ನು ಸಾಮೂಹಿಕವಾಗಿ ಸಂಘಟನೆಯ ಮೂಲಕ ಸಾಧಿಸಲು ಸಾಧ್ಯವಾಗುತ್ತದೆ. ವ್ಯಕ್ತಿಯ ಶೈಕ್ಷಣಿಕ ಹಂತದ ಬಳಿಕ ವ್ಯಕ್ತಿತ್ವ ವಿಕಸನ, ಸಾಮಾಜಿಕ ಹೊಂದಾಣಿಕೆಯನ್ನು ಬೆಸೆಯಲು ಜೇಸಿಐ ಸಂಸ್ಥೆಯು ಸಹಕಾರಿಯಾಗುತ್ತದೆ’ ಎಂದರು.

ADVERTISEMENT

ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎ.ಟಿ. ಕೃಷ್ಣಮೂರ್ತಿ ಮಾತನಾಡಿ, ‘ಸಮಾಜಮುಖಿ ಚಿಂತನೆಯನ್ನೊಳಗೊಂಡ ಉತ್ತಮ ನಾಯಕರನ್ನು ಜೇಸಿಐ ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಎಲ್ಲಾ ಕೆಲಸಗಳನ್ನು ಸರ್ಕಾರದಿಂದಲೇ ನಿರೀಕ್ಷಿಸುವುದು ಸಾಧ್ಯವಿಲ್ಲ. ಸಂಘಸಂಸ್ಥೆಗಳು ನೆರವಿಗೆ ನಿಂತು ಸಮಾಜಮುಖಿ ಚಟುವಟಿಕೆಗಳನ್ನು ನಡೆಸುವುದರಿಂದ ದೇಶದ ಅಭಿವೃದ್ಧಿ ತಾನಾಗಿಯೇ ಸಾಗುತ್ತದೆ’ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಚಂದ್ರಶೇಖರ್, ಪೂರ್ವಾಧ್ಯಕ್ಷ ಯೋಗೇಶ್ ಕುಮಾರ್, ವಲಯ ಉಪಾಧ್ಯಕ್ಷ ಕೆ.ಡಿ ಪ್ರಶಾಂತ್, ಸ್ಥಾಪಕ ಅಧ್ಯಕ್ಷ ಡಾ.ಮೋಹನ್ ರಾಜಣ್ಣ, ನಿಕಟಪೂರ್ವ ಬಿ.ಕೆ. ಚಂದ್ರಶೇಖರ್, ವೈ.ಬಿ.ಸುಂದ್ರೇಶ್, ಎಂ.ಸಿ. ಗಣೇಶ್ ಗೌಡ, ಜಗತ್, ಜೇಸಿರೇಟ್ ಅಧ್ಯಕ್ಷೆ ಸೌಮ್ಯಾ, ಚತುರ್ಥಿ, ಪುನೀತ್ ಪರಮೇಶ್, ರವಿಕುಮಾರ್, ರಂಜಿತ್, ವಿಕಾಸ್, ಡಿ.ಡಿ ರಮೇಶ್, ಅರುಣ್ ಕುಮಾರ್, ಬಾಲಕೃಷ್ಣ, ದರ್ಶನ್, ಸತ್ಯಕುಮಾರ್, ಆದರ್ಶ, ಹರೀಶ್, ಭರತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.