ಚಿಕ್ಕಮಗಳೂರು: 2023–24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ತಾಲ್ಲೂಕಿನಲ್ಲಿ ಹಲವು ಬೆಳೆಗಳನ್ನು ಕೃಷಿ ಇಲಾಖೆ ಆಯ್ಕೆ ಮಾಡಿದೆ.
ಕಸಬಾ ಹೋಬಳಿಗೆ ಭತ್ತ, ರಾಗಿ, ಮುಸುಕಿನ ಜೋಳ, ಆಲೂಗಡ್ಡೆ, ಟೊಮೆಟೊ, ಲಕ್ಯಾ ಮತ್ತು ಅಂಬಳೆ ಹೋಬಳಿಗೆ ಎಳ್ಳು, ಮುಸುಕಿನ ಜೋಳ, ರಾಗಿ, ಸೂರ್ಯಕಾಂತಿ, ಹತ್ತಿ, ಟೊಮೆಟೊ, ಎಲೆಕೋಸು, ಈರುಳ್ಳಿ, ನೆಲಗಡಲೆ ಬೆಳೆಗಳನ್ನು ಆಯ್ಕೆ ಮಾಡಿದೆ.
ಎಳ್ಳು ಬೆಳೆದಿರುವ ರೈತರು ಜೂನ್ 30ರೊಳಗೆ, ಈರುಳ್ಳಿ, ಎಲೆಕೋಸು, ಟೊಮೆಟೊ, ಆಲೂಗಡ್ಡೆ ಬೆಳೆಗಾರರು ಜುಲೈ 15ರೊಳಗೆ, ಸೂರ್ಯಕಾಂತಿ, ನೆಲಗಡಲೆ ಮತ್ತು ಹತ್ತಿ ಬೆಳೆದಿರುವ ರೈತರು ಜುಲೈ 31ರೊಳಗೆ, ಭತ್ತ, ಮುಸುಕಿನ ಜೋಳ, ರಾಗಿ ಬೆಳೆದಿರುವ ರೈತರು ಆಗಸ್ಟ್ 16ರೊಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.