ADVERTISEMENT

ಚಿಕ್ಕಮಗಳೂರು: ದೇವೀರಮ್ಮ ಬೆಟ್ಟ ಏರಲು 2 ದಿನ ಅವಕಾಶ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2024, 21:15 IST
Last Updated 3 ನವೆಂಬರ್ 2024, 21:15 IST
ಚಿಕ್ಕಮಗಳೂರಿನ ಬಿಂಡಿಗ ದೇವೀರಮ್ಮ ದೇವಿಯ ದರ್ಶನ ಪಡೆಯಲು ದೇವಿರಮ್ಮ ಬೆಟ್ಟ ಹತ್ತಿದ ಜನ
ಚಿಕ್ಕಮಗಳೂರಿನ ಬಿಂಡಿಗ ದೇವೀರಮ್ಮ ದೇವಿಯ ದರ್ಶನ ಪಡೆಯಲು ದೇವಿರಮ್ಮ ಬೆಟ್ಟ ಹತ್ತಿದ ಜನ   

ಚಿಕ್ಕಮಗಳೂರು: ಬೆಟ್ಟ ಏರಿ ಬಿಂಡಿಗ ದೇವೀರಮ್ಮ ದೇವಿ ದರ್ಶನಕ್ಕೆ ವರ್ಷದಲ್ಲಿ ಒಂದು ದಿನ ಮಾತ್ರ ಇದ್ದ ಅವಕಾಶವನ್ನು ಮುಂದಿನ ವರ್ಷದಿಂದ ಎರಡು ದಿನಗಳಿಗೆ ವಿಸ್ತರಣೆ ಮಾಡಲು ದೇವಾಲಯ ವ್ಯವಸ್ಥಾಪನಾ ಮಂಡಳಿ ನಿರ್ಧರಿಸಿದೆ.

ಬೆಟ್ಟದ ತಳದಲ್ಲಿರುವ ದೇಗುಲದಲ್ಲಿ ಪ್ರತಿಷ್ಠಾಪನೆ ಮಾಡಿರುವ ದೇವಿಯ ವಿಗ್ರಹ ನರಕ ಚತುರ್ದಶಿಯ ದಿನ ಬೆಟ್ಟದ ತುದಿಗೆ ಒಯ್ದು ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಒಂದೇ ದಿನ ಹೆಚ್ಚಿನ ಭಕ್ತರು ಜಮಾಯಿಸಿದ್ದರಿಂದ ಹಲವರು ಬಿದ್ದು ಕೈಕಾಲು ಮುರಿದು ಕೊಂಡಿದ್ದರು. ಜನದಟ್ಟಣೆ ಕಡಿಮೆ ಮಾಡಲು ಬೆಟ್ಟ ಹತ್ತಲು 2 ದಿನ ಅವಕಾಶ ನೀಡಲು ಸಮಿತಿ ತಿರ್ಮಾನ ಕೈಗೊಂಡಿದೆ. ‘ನರಕ ಚತುದರ್ಶಿ ಹಿಂದಿನ ದಿನ ಬೆಳಿಗ್ಗೆ ದೇವಿಯ ವಿಗ್ರಹವನ್ನು ಬೆಟ್ಟದ ತುದಿಯಲ್ಲಿ ಪ್ರತಿಷ್ಠಾಪಿಸಲು ತೀರ್ಮಾನಿಸಲಾಗಿದೆ. ಮುಂದಿನ ವರ್ಷದಿಂದ ಭಕ್ತರಿಗೆ ಬೆಟ್ಟ ಹತ್ತಲು 2 ದಿನ ಅವಕಾಶ ದೊರೆಯಲಿದೆ’ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕುಲಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT