ADVERTISEMENT

ನಿಧಿಗಾಗಿ 25 ಅಡಿ ಆಳದ ಗುಂಡಿ ತೋಡಿ ಶೋಧ: ಗ್ರಾಮಸ್ಥರನ್ನು ಕಂಡು ಕಿಡಿಗೇಡಿಗಳು ಪರಾರಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 5:57 IST
Last Updated 23 ಜೂನ್ 2023, 5:57 IST
   

ಚಿಕ್ಕಮಗಳೂರು: ಆಲ್ದೂರು ಸಮೀಪದ ಮುಳ್ಳಾರೆಯ ಅರಣ್ಯ ಪ್ರದೇಶದಲ್ಲಿ ನಿಧಿಗಾಗಿ 25 ಅಡಿ ಆಳದ ಗುಂಡಿ ತೋಡಿ ಶೋಧಿಸುತ್ತಿದ್ದ ದುಷ್ಕರ್ಮಿಗಳು, ಗ್ರಾಮಸ್ಥರನ್ನು ಕಂಡು ಪರಾರಿಯಾಗಿದ್ದಾರೆ.

ಗ್ರಾಮದ ಸಮೀದಪ ಅರಣ್ಯದಲ್ಲಿ 15 ಅಡಿ ಅಗಲ ಮತ್ತು  25 ಅಡಿ ಆಳದ ಗುಂಡಿಯನ್ನು ಗುರುವಾರ ರಾತ್ರಿ ತೋಡುತ್ತಿದ್ದರು. ನಿರ್ಜನ ಪ್ರದೇಶದಲ್ಲಿ ಬೆಳಕು ಕಂಡ ಗ್ರಾಮದ ಕೆಲವರು ಸ್ಥಳಕ್ಕೆ ತೆರಳಿದ್ದಾರೆ. ಜನ ಹತ್ತಿರಕ್ಕೆ ಬರುತ್ತಿದ್ದಂತೆ ಎಲ್ಲಾ ವಸ್ತುಗಳನ್ನು ಅಲ್ಲೇ ಬಿಟ್ಟು ಕಿಡಿಗೇಡಿಗಳು ಓಡಿ ಹೋಗಿದ್ದಾರೆ.

ಸ್ಥಳದಲ್ಲಿ ಅರಿಶಿನಿ, ಕುಂಕುಮ, ಕುಂಬಳಕಾಯಿ, ತೆಂಗಿನ ಕಾಯಿ, ಬಲಿ ಕೊಡಲು ತಂದಿದ್ದರು ಎನ್ನಲಾದ ಕೋಳಿ ಸೇರಿ ಎಲ್ಲಾ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. ಉಡುಪಿ ನೋಂದಣಿ ಸಂಖ್ಯೆ ಇರುವ ಎರಡು ಕಾರಿನಲ್ಲಿ ಬಂದಿದ್ದರು ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಲ್ದೂರು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.