ADVERTISEMENT

ಕೊಪ್ಪ | ದೀಪಾವಳಿ ಪ್ರಯುಕ್ತ ಕೋಲಾಟ: ಬಲೀಂದ್ರ ದೇವರಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 14:39 IST
Last Updated 9 ನವೆಂಬರ್ 2024, 14:39 IST
ಕೊಪ್ಪ ತಾಲ್ಲೂಕಿನ ಶೆಟ್ಟಿಹಡ್ಲು ಗ್ರಾಮದಲ್ಲಿ ಕೋಲಾಟದ ಬಳಿಕ ಕೋಲುಗಳ ವಿಸರ್ಜನೆಗೆ ಪಲ್ಲಕ್ಕಿ ಉತ್ಸವ ನಡೆಯಿತು
ಕೊಪ್ಪ ತಾಲ್ಲೂಕಿನ ಶೆಟ್ಟಿಹಡ್ಲು ಗ್ರಾಮದಲ್ಲಿ ಕೋಲಾಟದ ಬಳಿಕ ಕೋಲುಗಳ ವಿಸರ್ಜನೆಗೆ ಪಲ್ಲಕ್ಕಿ ಉತ್ಸವ ನಡೆಯಿತು   

ಕೊಪ್ಪ: ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಹಡ್ಲು ಗ್ರಾಮದಲ್ಲಿ ದೀಪಾವಳಿ ಪ್ರಯುಕ್ತ ಕೋಲಾಟದ ಮೂಲಕ ಬಲೀಂದ್ರ ದೇವರನ್ನು 5 ದಿನಗಳ ಪರ್ಯಂತ ಆರಾಧಿಸಲಾಯಿತು.

ದೀಪಾವಳಿಯ ಅಮಾವಾಸ್ಯೆ ಹಿಂದಿನ ರಾತ್ರಿ ಕೌರಿ, ಹಲಸು, ಗಂಧ, ಕಾಮ್ಟೆ ಕೋಲುಗಳನ್ನು ಪೂಜಿಸಲಾಯಿತು. ಕೋಲಾಟಕ್ಕೆ ಕಾಫಿ ಕೋಲುಗಳನ್ನು ಬಳಸಲಾಯಿತು. ಕೊಪ್ಪ, ತೀರ್ಥಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಮನೆಗಳಿಗೆ ತೆರಳಿ ಕೋಲಾಟ ಆಡಲಾಯಿತು. ಬಳಿಕ ಪಲ್ಲಕ್ಕಿ ಉತ್ಸವದ ಮೂಲಕ ಶೆಟ್ಟಿಹಡ್ಲು ಹಳ್ಳದಲ್ಲಿ ಕೋಲುಗಳನ್ನು ವಿಸರ್ಜಿಸಲಾಯಿತು.

ಗ್ರಾಮದ ಮನೆಗಳಿಗೆ ಕೋಲಾಟಕ್ಕೆ ತೆರಳಿದ್ದಾಗ ಜನರು ಬಲೀಂದ್ರ ದೇವರಿಗೆ ದೀಪ ಹಚ್ಚಿ, ಆರತಿ ಬೆಳಗಿ, ಹಣ್ಣು ಕಾಯಿ ಪೂಜೆ ಸಲ್ಲಿಸಿದರು. ಗುರುವಾರ ಸಂಜೆ ಕೋಲುಗಳ ವಿಸರ್ಜನೆಯ ಭಾಗವಾಗಿ ಪಲ್ಲಕ್ಕಿ ಉತ್ಸವ ನಡೆಯಿತು. ವಾದ್ಯ, ಹಲಗೆ, ಬ್ಯಾಂಡ್ ಸೆಟ್ ವಾದನ ಪಲ್ಲಕ್ಕಿ ಉತ್ಸವಕ್ಕೆ ಮೆರುಗು ನೀಡಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.