ADVERTISEMENT

ಡೆಂಗಿ ನಿಯಂತ್ರಣ,–ಜಾಗೃತಿ ಜಾಥಾ 

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:06 IST
Last Updated 7 ಜುಲೈ 2024, 14:06 IST
ತರೀಕೆರೆ ಪಟ್ಟಣದ ಶ್ರೀಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಡೆಂಗಿ ನಿಯಂತ್ರಣ–ಜಾಗೃತಿ ಜಾಥಾ, ರೋಗ ನಿರೋಧಕ ಆಯುಷ್ ಔಷಧಿಗಳ ವಿತರಣೆ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಹಾಗೂ ಪುರಸಭಾ ಸದಸ್ಯ ಶಶಾಂಕ್ ಟಿ.ಜಿ. ಉದ್ಘಾಟಿಸಿದರು
ತರೀಕೆರೆ ಪಟ್ಟಣದ ಶ್ರೀಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಡೆಂಗಿ ನಿಯಂತ್ರಣ–ಜಾಗೃತಿ ಜಾಥಾ, ರೋಗ ನಿರೋಧಕ ಆಯುಷ್ ಔಷಧಿಗಳ ವಿತರಣೆ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಹಾಗೂ ಪುರಸಭಾ ಸದಸ್ಯ ಶಶಾಂಕ್ ಟಿ.ಜಿ. ಉದ್ಘಾಟಿಸಿದರು   

ತರೀಕೆರೆ: ಪಟ್ಟಣದ ಶ್ರೀಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಡೆಂಗಿ ನಿಯಂತ್ರಣ–ಜಾಗೃತಿ ಜಾಥಾ, ರೋಗ ನಿರೋಧಕ ಆಯುಷ್ ಔಷಧಿಗಳ ವಿತರಣೆ ಕಾರ್ಯಕ್ರಮ ಈಚೆಗೆ ಹಮ್ಮಿಕೊಳ್ಳಲಾಯಿತು.

ಡಾ. ಚಂದ್ರಶೇಖರ್, ಡಾ.ಕಿಶೋರ್ ಕುಮಾರ್ ಅವರು, ‘ಡೆಂಗಿ ಹರಡುವಿಕೆ, ಲಾರ್ವ ಸಮೀಕ್ಷೆ, ನಿಯಂತ್ರಣ, ಸಂರಕ್ಷಣಾ ವಿಧಾನಗಳು, ರೋಗದ ಲಕ್ಷಣಗಳು, ಚಿಕಿತ್ಸೆ ಕುರಿತು ಮಾಹಿತಿ’ ನೀಡಿದರು. ಬಳಿಕ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಔಷಧಿ ವಿತರಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಹಾಗೂ ಪುರಸಭಾ ಸದಸ್ಯ ಶಶಾಂಕ್ ಟಿ.ಜಿ., ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಪ್ರಶಾಂತ್, ಪ್ರಥಮ ದರ್ಜೆ ಸಹಾಯಕ ಶ್ರೀಧರ್, ಆರೋಗ್ಯ ನಿರೀಕ್ಷಕ ರಾಜು, ಶುಶ್ರೂಷಕಿ ಧನಲಕ್ಷ್ಮಿ, ಶಿಕ್ಷಕರಾದ ರಾಧಿಕಾ, ನವೀನ್, ತೇಜಸ್ವಿ, ಉಮೇಶ್, ಮೊಹಮ್ಮದ್ ಗೌಸ್ , ಆಶಾ ಕಾರ್ಯಕರ್ತೆ ನಿರ್ಮಲಾ ಹಾಗೂ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಸಿಬ್ಬಂದಿ ಮಧು, ಅಮೃತಾ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.