ADVERTISEMENT

ಕೊಪ್ಪ | ಡಿಎಲ್‌, ಹೆಲ್ಮೆಟ್ ಇಲ್ಲದೆ ಚಾಲನೆ: ಸರ್ಕಾರಿ ನೌಕರನಿಗೆ ₹1500 ದಂಡ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 13:56 IST
Last Updated 5 ನವೆಂಬರ್ 2024, 13:56 IST
   

ಕೊಪ್ಪ: ಹೆಲ್ಮೆಟ್‌ ಧರಿಸದೆ, ಚಾಲನಾ ಪರವಾನಗಿ ಇಲ್ಲದೆ  ದ್ವಿಚಕ್ರ ವಾಹನ ಓಡಿಸಿದ ಸರ್ಕಾರಿ ನೌಕರರೊಬ್ಬರಿಗೆ, ವಾಹನಗಳ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದ ಕೊಪ್ಪ ಪಿಎಸ್ಐ ಬಸವರಾಜ್  ₹1500 ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿ ಹೊಸ ದ್ವಿಚಕ್ರ ವಾಹನವನ್ನು ಖರೀದಿಸಿದ್ದರು. ವಾಹನಕ್ಕೆ ನಂಬರ್‌ ಪ್ಲೇಟ್‌ ಇನ್ನೂ ಅಳವಡಿಸಿರಲಿಲ್ಲ. ದಾಖಲೆಗಳನ್ನು ಪರಿಶೀಲಿಸುವಾಗ ಚಾಲನೆ ಮಾಡುತ್ತಿದ್ದ ವ್ಯಕ್ತಿಯ ಬಳಿ ಡಿಎಲ್‌ ಇರಲಿಲ್ಲ. ಹೆಲ್ಮೆಟ್‌ ಕೂಡ ಧರಿಸಿರಲಿಲ್ಲ. ಹೆಲ್ಮೆಟ್‌ ಇಲ್ಲದೆ ವಾಹನ ಚಲಾಯಿಸಿದ್ದಕ್ಕೆ ₹500 ಹಾಗೂ ಡಿಎಲ್‌ ಇಲ್ಲದ ಕಾರಣ ₹1 ಸಾವಿರ ಸೇರಿ ಒಟ್ಟು ₹1,500 ದಂಡ ವಿಧಿಸಲಾಗಿದೆ ಪೊಲೀಸ್‌ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT