ಶೃಂಗೇರಿ (ಚಿಕ್ಕಮಗಳೂರು): ಇಲ್ಲಿಯ ಶಾರದಾ ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ವಸ್ತ್ರಸಂಹಿತೆಯನ್ನು ಶಾರದಾ ಪೀಠ ರೂಪಿಸಿದ್ದು, ಆಗಸ್ಟ್ 15ರಿಂದ ಜಾರಿಗೆ ಬರಲಿದೆ.
ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಭಕ್ತರು ದರ್ಶನಕ್ಕೆ ಬರಬೇಕು. ಪುರುಷರು ಧೋತಿ, ಶಲ್ಯ ಮತ್ತು ಉತ್ತರೀಯ, ಮಹಿಳೆಯರು ಸೀರೆ–ರವಿಕೆ, ಸಲ್ವಾರ್ ಜೊತೆಗೆ ದುಪ್ಪಟ್ಟ ಅಥವಾ ಲಂಗ ದಾವಣಿ ಧರಿಸಲು ಅವಕಾಶ ಇದೆ.
ಭಾರತೀಯ ಸಂಪ್ರದಾಯವಲ್ಲದ ಉಡುಗೆ ತೊಟ್ಟು ಬಂದವರಿಗೆ ಮಹಾ ಮಂಟಪ, ಗುರು ನಿವಾಸ, ಪಾದಪೂಜೆ, ಗುರುಗಳ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಹೊರಗಿನ ಪ್ರಾಕಾರದಿಂದಲೇ ದೇವರ ದರ್ಶನ ಪಡೆಯಬೇಕು ಎಂದು ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.