ADVERTISEMENT

ವರದಿ ಪರಿಣಾಮ | ನರಸಿಂಹರಾಜಪುರ: ಕೆರೆಗೆ ತಡೆಗೋಡೆ ನಿರ್ಮಾಣಕ್ಕೆ ಚಾಲನೆ

ನರಸಿಂಹರಾಜಪುರ ತಾಲ್ಲೂಕಿನ ಮುಳವಳ್ಳಿ ಸಮೀಪದ ಜೋಡಿಗೆರೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 14:40 IST
Last Updated 19 ನವೆಂಬರ್ 2024, 14:40 IST
ನರಸಿಂಹರಾಜಪುರ ತಾಲ್ಲೂಕು ಬಾಳೆಹೊನ್ನೂರಿಗೆ ಮಾರ್ಗಮಧ್ಯ ಸೀಗುವ ಮುಳುವಳ್ಳಿ ಸಮೀಪದ ಜೋಡಿಗೆರೆಯ ರಸ್ತೆ ಬದಿಯಲ್ಲಿರುವ ಕೆರೆಗೆ ಲೋಕೋಪಯೋಗಿ ಇಲಾಖೆ ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡಿದೆ
ನರಸಿಂಹರಾಜಪುರ ತಾಲ್ಲೂಕು ಬಾಳೆಹೊನ್ನೂರಿಗೆ ಮಾರ್ಗಮಧ್ಯ ಸೀಗುವ ಮುಳುವಳ್ಳಿ ಸಮೀಪದ ಜೋಡಿಗೆರೆಯ ರಸ್ತೆ ಬದಿಯಲ್ಲಿರುವ ಕೆರೆಗೆ ಲೋಕೋಪಯೋಗಿ ಇಲಾಖೆ ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡಿದೆ   

ನರಸಿಂಹರಾಜಪುರ: ತಾಲ್ಲೂಕಿನ ಮುಳವಳ್ಳಿ ಸಮೀಪದ ಜೋಡಿಗೆರೆ ಬಳಿ ಬಾಳೆಹೊನ್ನೂರು ಮುಖ್ಯರಸ್ತೆಯ ಬದಿಯಲ್ಲಿರುವ ಕೆರೆಗೆ ತಡೆಗೋಡೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಚಾಲನೆ ನೀಡಿದೆ.

ತಾಲ್ಲೂಕು ಕೇಂದ್ರದಿಂದ ಬಾಳೆಹೊನ್ನೂರಿಗೆ ಸಂಪರ್ಕಿಸುವ ಮುಖ್ಯರಸ್ತೆಯ ಮುಳುವಳ್ಳಿ ಸಮೀಪ ಎರಡೂ ಬದಿ ಕೆರೆ ಇದ್ದು, ಅಪಘಾತಗಳು ಸಂಭವಿಸುತ್ತಿದ್ದವು. ಇಲ್ಲಿನ ಕೆರೆಗೆ ಕಾರೊಂದು ಚಾಲಕ ನಿಯಂತ್ರಣತಪ್ಪಿ ಬಿದ್ದು ಪ್ರಯಾಣಿಕರೊಬ್ಬರು ಮೃತಪಟ್ಟಿದ್ದರು. ಕೆರೆಗೆ ತಡೆಗೋಡೆ ಇಲ್ಲದೆ ಅವಘಡ ನಡೆಯುತ್ತಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಈಚೆಗೆ ಲೇಖನ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT