ADVERTISEMENT

ಆಲ್ದೂರು | ಲೂರ್ದ್‌ ಮಾತೆ ಚರ್ಚ್‌ನಲ್ಲಿ ಈಸ್ಟರ್ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 15:35 IST
Last Updated 31 ಮಾರ್ಚ್ 2024, 15:35 IST
ಈಸ್ಟರ್ ಹಬ್ಬದ ಪ್ರಯುಕ್ತ ಭಾನುವಾರ ಕೂದುವಳ್ಳಿ ಲೂರ್ದು ಮಾತೆ ಚರ್ಚ್ ನಲ್ಲಿ ಕ್ರೈಸ್ತ ಭಕ್ತಾದಿಗಳು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಈಸ್ಟರ್ ಹಬ್ಬದ ಪ್ರಯುಕ್ತ ಭಾನುವಾರ ಕೂದುವಳ್ಳಿ ಲೂರ್ದು ಮಾತೆ ಚರ್ಚ್ ನಲ್ಲಿ ಕ್ರೈಸ್ತ ಭಕ್ತಾದಿಗಳು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.   

ಆಲ್ದೂರು: ಸಮೀಪದ ಕೂದುವಳ್ಳಿ ಲೂರ್ದ್‌ ಮಾತೆ ಚರ್ಚ್‌ನಲ್ಲಿ ಈಸ್ಟರ್ ಹಬ್ಬದ ಸಂಭ್ರಮಾಚರಣೆಯಲ್ಲಿ ಕ್ರೈಸ್ತರು ಭಾಗವಹಿಸಿದರು. ಶನಿವಾರ ರಾತ್ರಿ ವಿಶೇಷ ಪೂಜೆ ನಡೆಯಿತು.

ಭಾನುವಾರ ಬೆಳಗಿನ ಪೂಜೆ ಅರ್ಪಿಸಿದ ಶಿವಮೊಗ್ಗ ಧರ್ಮ ಕ್ಷೇತ್ರದ ಫಾ. ಸಂತೋಷ್ ಪೆರೇರಾ ಸಂದೇಶ ನೀಡಿ, ‘ಯೇಸುವಿನ ಪುನರುತ್ಥಾನದ ಹಬ್ಬವಾಗಿರುವ ಈಸ್ಟರ್, ಅವಿಶ್ವಾಸದಿಂದ ವಿಶ್ವಾಸದೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ ಕೊಂಡಯುವ ಸಂದೇಶ ನೀಡುತ್ತದೆ’ ಎಂದರು.

ಧರ್ಮಕೇಂದ್ರದ ಫಾ. ಡೆನ್ಜಿಲ್ ಲೋಬೊ ಧಾರ್ಮಿಕ ಕಾರ್ಯಗಳ ನೇತೃತ್ವ ವಹಿಸಿದ್ದರು. ಆಲ್ದೂರು, ಕೂದುವಳ್ಳಿ, ವಸ್ತಾರೆ, ಮಡೆನೇರಲು, ಬನ್ನೂರು ಭಾಗಗಳಿಂದ ಭಕ್ತರು ಭಾಗವಹಿಸಿದ್ದರು.

ADVERTISEMENT
ಈಸ್ಟರ್ ಹಬ್ಬದ ಪ್ರಯುಕ್ತ ಭಾನುವಾರ ಕೂದುವಳ್ಳಿ ಲೂರ್ದು ಮಾತೆ ಚರ್ಚ್ ನಲ್ಲಿ ಕ್ರೈಸ್ತ ಭಕ್ತಾದಿಗಳು ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.