ADVERTISEMENT

ಈದ್ ಮಿಲಾದ್, ಗಣಪತಿ ಸಮಿತಿ ಮಾದರಿ: ನಿರಂಜನಗೌಡ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 14:41 IST
Last Updated 19 ನವೆಂಬರ್ 2024, 14:41 IST
ನರಸಿಂಹರಾಜಪುರದ ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಟಣದ ಸುಂಕದಕಟ್ಟೆ ಸಮಿತಿಯವರಿಗೆ ಪಿಎಸ್‌ಐ ನಿರಂಜನಗೌಡ ಅವರು ಜಿಲ್ಲಾ ಪೊಲೀಸ್ ಇಲಾಖೆಯಿಂದ ನೀಡಿದ ಅಭಿನಂದನಾ ಪತ್ರ ಹಸ್ತಾಂತರಿಸಿದರು
ನರಸಿಂಹರಾಜಪುರದ ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಟಣದ ಸುಂಕದಕಟ್ಟೆ ಸಮಿತಿಯವರಿಗೆ ಪಿಎಸ್‌ಐ ನಿರಂಜನಗೌಡ ಅವರು ಜಿಲ್ಲಾ ಪೊಲೀಸ್ ಇಲಾಖೆಯಿಂದ ನೀಡಿದ ಅಭಿನಂದನಾ ಪತ್ರ ಹಸ್ತಾಂತರಿಸಿದರು   

ನರಸಿಂಹರಾಜಪುರ: ಪಟ್ಟಣದ ಸುಂಕದಕಟ್ಟೆ ವಿದ್ಯಾ ಗಣಪತಿ ಸಮಿತಿ ಹಾಗೂ ಜಾಮಿಯಾ ಮಸೀದಿಯ ಈದ್ ಮಿಲಾದ್ ಸಮಿತಿಯವರು ಕಾನೂನನ್ನು ಗೌರವಿಸಿ ಮಾದರಿಯಾಗಿರುವುದನ್ನು ಗುರುತಿಸಿ ಜಿಲ್ಲಾ ಪೊಲೀಸ್ ಇಲಾಖೆಯು ಸಮಿತಿಯನ್ನು ಸನ್ಮಾನಿಸಿ, ಅಭಿನಂದನಾ ಪತ್ರ ನೀಡಿದ್ದಾರೆ ಎಂದು ಪಿಎಸ್‌ಐ ನಿರಂಜನಗೌಡ ತಿಳಿಸಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ಸುಂಕದಕಟ್ಟೆ ವಿದ್ಯಾಗಣಪತಿ ಸಮಿತಿ ಅಧ್ಯಕ್ಷ ನವೀನ್, ಸದಸ್ಯರಿಗೆ ಹಾಗೂ ಜಾಮಿಯಾ ಮಸೀದಿಯ ಈದ್ ಮಿಲಾದ್ ಸಮಿತಿ ಅಧ್ಯಕ್ಷ ನಾಸೀರ್ ಖಾನ್ ಹಾಗೂ ಸದಸ್ಯರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ನೀಡಿದ ಅಭಿನಂದನೆ ಪತ್ರವನ್ನು ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಣಪತಿ ಹಬ್ಬ ಹಾಗೂ ಈದ್ ಮಿಲಾದ್ ಸಮಯದಲ್ಲಿ ಪೊಲೀಸ್ ಇಲಾಖೆ ನೀಡಿದ ಸೂಚನೆಯನ್ನು ಪಾಲಿಸಿ ಕಾನೂನು ಉಲ್ಲಂಘನೆಯಾಗದಂತೆ ಹಬ್ಬ ಆಚರಿಸಿದ 9 ಸಮಿತಿಗಳಿಗೆ ಎಸ್‌ಪಿ ಅವರು ಪೊಲೀಸ್ ಇಲಾಖೆ ಹಾಗೂ ವೈಯಕ್ತಿಕವಾಗಿ ಅಭಿನಂದಿಸಿದ್ದಾರೆ. 9 ಸಮಿತಿಗಳಲ್ಲಿ ನರಸಿಂಹರಾಜಪುರ ಪಟ್ಟಣದ ಸುಂಕದಕಟ್ಟೆ ಗಣಪತಿ ಸಮಿತಿ, ಈದ್ ಮಿಲಾದ್ ಸಮಿತಿಗೆ ಅಭಿನಂದನಾ ಪತ್ರ ಲಭಿಸಿದೆ. ಮುಂದಿನ ದಿನಗಳಲ್ಲಿ ಎಲ್ಲ ಸಂಘ ಸಂಸ್ಥೆಗಳು ಕಾನೂನು ಗೌರವಿಸಿ ಶಾಂತಿ ಕಾಪಾಡಬೇಕು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.