ADVERTISEMENT

ದೇವನಗೂಲ್: ನಿಲ್ಲದ ಕಾಡಾನೆ ದಾಳಿ, ಅಪಾರ ಪ್ರಮಾಣದ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 13:54 IST
Last Updated 21 ಅಕ್ಟೋಬರ್ 2024, 13:54 IST
ಕೊಟ್ಟಿಗೆಹಾರದ ದೇವನಗೂಲ್ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ಸತೀಶ್ ಆಚಾರ್ಯ ಎಂಬುವರ ಬಾಳೆಗಿಡಗಳನ್ನು ತುಳಿದು ನಾಶಪಡಿಸಿರುವುದು
ಕೊಟ್ಟಿಗೆಹಾರದ ದೇವನಗೂಲ್ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ಸತೀಶ್ ಆಚಾರ್ಯ ಎಂಬುವರ ಬಾಳೆಗಿಡಗಳನ್ನು ತುಳಿದು ನಾಶಪಡಿಸಿರುವುದು   

ಕೊಟ್ಟಿಗೆಹಾರ: ಸಮೀಪದ ದೇವನಗೂಲ್ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ, ಅಪಾರ ಪ್ರಮಾಣದ ಬೆಳೆ ಹಾನಿಗೊಳಿಸಿದೆ. ಈ ಭಾಗದಲ್ಲಿ ಕೆಲವು ದಿನಗಳಿಂದ ಒಂಟಿ ಸಲಗ ರಾತ್ರಿ ಕೃಷಿ ಜಮೀನಿಗೆ ನುಗ್ಗಿ ಅಡಿಕೆ, ಬಾಳೆ, ತೆಂಗು ಮತ್ತಿತರ ಬೆಳೆಗಳನ್ನು ತುಳಿದು ಹಾನಿ ಮಾಡುತ್ತಿದೆ.

ಆಹಾರ ಅರಸಿಕೊಂಡು ರಾತ್ರಿ ತೋಟಕ್ಕೆ ನುಗ್ಗುವ ಒಂಟಿ ಸಲಗ, ಬೆಳಗಿನ ಜಾವದವರೆಗೂ ತೋಟದಲ್ಲೇ ಇದ್ದು ಬೆಳೆ ನಾಶ ಮಾಡುತ್ತಿದೆ. ದೇವನಗೂಲ್ ಗ್ರಾಮದ ಜನವಸತಿ ಪ್ರದೇಶದವರೆಗೆ ಕಾಡಾನೆ ಬಂದಿರುವುದರಿಂದ ಜನರು ಆತಂಕಗೊಂಡಿದ್ದಾರೆ. ಗ್ರಾಮದ ಸತೀಶ್ ಆಚಾರ್ಯ, ಬೆಳ್ಳಾಚಾರ್, ನಟೇಶ್ ಆಚಾರ್ಯ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ, ಕಾಫಿ, ಅಡಿಕೆ ಗಿಡಗಳನ್ನು ಕಾಡಾನೆ ಧ್ವಂಸಗೊಳಿಸಿದೆ. ಕಾಡಾನೆಯನ್ನು ಹಿಡಿದು ಸ್ಥಳಾಂತರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT