ADVERTISEMENT

ರಸ ಗೊಬ್ಬರ ಬಳಕೆಯಿಂದ ಕೃಷಿಭೂಮಿ ಬರಡು: ರಂಭಾಪುರಿ ಸ್ವಾಮೀಜಿ

‘ರೈತ ಮತ್ತು ಕೃಷಿ ಚಿಂತನ’ದಲ್ಲಿ ರಂಭಾಪುರಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 4:11 IST
Last Updated 28 ಮಾರ್ಚ್ 2021, 4:11 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದಲ್ಲಿ ಗುರುಪಾದಯ್ಯ ಸಾಲಿಮಠ ಸಂಗ್ರಹಿಸಿದ ‘ಸಾಧನೆಯ ಸತ್ಪಥ ಭಾಗ-2’ ಕೃತಿಯನ್ನು ರಂಭಾಪುರಿ ಸ್ವಾಮೀಜಿ ಬಿಡುಗಡೆ ಮಾಡಿದರು. ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಇದ್ದರು.
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದಲ್ಲಿ ಗುರುಪಾದಯ್ಯ ಸಾಲಿಮಠ ಸಂಗ್ರಹಿಸಿದ ‘ಸಾಧನೆಯ ಸತ್ಪಥ ಭಾಗ-2’ ಕೃತಿಯನ್ನು ರಂಭಾಪುರಿ ಸ್ವಾಮೀಜಿ ಬಿಡುಗಡೆ ಮಾಡಿದರು. ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಇದ್ದರು.   

ರಂಭಾಪುರಿ ಪೀಠ (ಬಾಳೆಹೊನ್ನೂರು): ‘ಸ್ಪರ್ಧಾತ್ಮಕತೆಯಲ್ಲಿ ರೈತನ ಪರಿಸ್ಥಿತಿ ಸಂಕಷ್ಟಕ್ಕೊಳಗಾಗಿದೆ. ಸಾಂಪ್ರದಾಯಿಕ ಕೃಷಿಯಿಂದ ಬದುಕು ಕಷ್ಟವಾಗಿದೆ. ಸುಧಾರಿತ ಕೃಷಿ ಅಳವಡಿಸಿದರೆ, ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಭೂಮಿ ಬರಡಾಗುತ್ತಿದೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ನಡೆದ ‘ರೈತ ಮತ್ತು ಕೃಷಿ ಚಿಂತನ’ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸಾವಯವ ಕೃಷಿ ಮಾಡುವುದರ ಮೂಲಕ ಭೂಮಿಯಲ್ಲಿರುವ ಮಣ್ಣಿನ ಸತ್ವವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಉತ್ತಮ ಬೀಜ, ಸಾವಯವ ಗೊಬ್ಬರ ಬಳಕೆ, ನೀರಿನ ಸೌಕರ್ಯ, ಆಧುನಿಕ ಬೇಸಾಯದಿಂದ ರೈತನ ಆರ್ಥಿಕ ಅಭಿವೃದ್ಧಿ ಸಾಧ್ಯ’ಎಂದರು.

‘ಸಾಧನೆಯ ಸತ್ಪಥ ಭಾಗ-2’ ಕೃತಿಯನ್ನು ಬಿಡುಗಡೆ ಮಾಡಿದ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್,ಮಾತನಾಡಿ,'ಅಸಿ ಮಸಿ ಕೃಷಿ ನಾಡಿನ ಸಂರಕ್ಷಣೆಗೆ ಬೇಕೇ ಬೇಕು. ದೇಶ ಕಾಯುವ ಸೈನಿಕ, ಉತ್ತಮ ಸಾಹಿತ್ಯ ಸಂರಕ್ಷಣೆ ಮತ್ತು ಕೃಷಿ ಇವುಗಳತ್ತ ಎಲ್ಲರ ಒಲವು ಸಹಕಾರ ಬೇಕಾಗುತ್ತದೆ’ ಎಂದರು.

ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಾಯಣಪುರ ‘ನೈಸರ್ಗಿಕ ಕೃಷಿ’ ಕುರಿತು ಮಾತನಾಡಿದರು. ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯ ರೈತರ ಸಮಕಾಲೀನ ಸಮಸ್ಯೆ ಪರಿಹಾರ ಕುರಿತು ಮಾತನಾಡಿದರು.

ADVERTISEMENT

ಅಖಿಲ ಭಾರತ ವೀರಶೈವ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಘಟಕಕ್ಕೆ ಆಯ್ಕೆಯಾದ ನೂತನ ಸದಸ್ಯರಿಗೆ ಅಧಿಕೃತ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಬೆಳಿಗ್ಗೆ ದೀಪೋತ್ಸವ- ಕುಂಕುಮೋತ್ಸವ, ಶಯನೋತ್ಸವ ನಡೆದವು. ಮಧ್ಯಾಹ್ನ ಶಿವಾನಂದ ಎಸ್ಟೇಟಿನಲ್ಲಿ ಪೂಜಾ-ಪ್ರಸಾದ ನಡೆಯಿತು.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ-ಶಾಸಕ ಕಳಕಪ್ಪ ಬಂಡಿ, ಅ.ಭಾ.ವೀ.ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ.ಲೋಕೇಶ, ಎಂ.ಎಸ್. ಚನ್ನಕೇಶವ, ಬೆಂಗಳೂರಿನ ಮಂಜುನಾಥ ಆರಾಧ್ಯ, ಚಿಕ್ಕಮಗಳೂರು ನಗರ ವೀರಶೈವ ಸಮಾಜದ ಕಾರ್ಯದರ್ಶಿ ಜಗದೀಶ, ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ, ನೀಲಗಲ್ಲ ಹಿರೇಮಠದ ಪಂಚಾಕ್ಷರ ಶಿವಾಚಾರ್ಯ, ತರೀಕೆರೆ ಹಿರೇಮಠದ ಜಗದೀಶ್ವರ ಶಿವಾಚಾರ್ಯ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಡಾ. ಕೆ.ಎಸ್.ಕೃಷ್ಣಾರೆಡ್ಡಿ, ಬೆಂಗಳೂರಿನ ಶ್ರೀನಿವಾಸರೆಡ್ಡಿ, ಶಿವಮೊಗ್ಗದ ಹನಸವಾಡಿ ಕೇಶವಮೂರ್ತಿ, ಗ್ರಂಥ ದಾನಿ ಎಂ.ಕೊಟ್ರೇಶಪ್ಪ ಹರಪನಹಳ್ಳಿ ಇವರಿಗೆ ಸ್ವಾಮೀಜಿ ಗುರುರಕ್ಷೆಯಿತ್ತು ಶುಭ ಹಾರೈಸಿದರು. ಕೆ.ಆರ್.ಭೂಮಿಕಾ, ಗುರುಲಿಂಗಯ್ಯ ಹಿತ್ತಲಶಿರೂರ, ಶಾಂತಾ ಆನಂದ, ಸದಸ್ಯ ಬಿ. ಜಗದೀಶ್ಚಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.