ADVERTISEMENT

ಮೇರಿ ಮಾತೆ ಹಬ್ಬಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 13:20 IST
Last Updated 1 ಸೆಪ್ಟೆಂಬರ್ 2024, 13:20 IST
ನರಸಿಂಹರಾಜಪುರದ ರೋಮನ್ ಕ್ಯಾಥೋಲಿಕ್ ಕೆಥಡ್ರಲ್ ಚರ್ಚ್ ಆವರಣದಲ್ಲಿರುವ ಮೇರಿ ಮಾತೆಗೆ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು
ನರಸಿಂಹರಾಜಪುರದ ರೋಮನ್ ಕ್ಯಾಥೋಲಿಕ್ ಕೆಥಡ್ರಲ್ ಚರ್ಚ್ ಆವರಣದಲ್ಲಿರುವ ಮೇರಿ ಮಾತೆಗೆ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು   

ನರಸಿಂಹರಾಜಪುರ: ಇಲ್ಲಿನ ರೋಮನ್ ಕೆಥೋಲಿಕ್ ಕೆಥೆಡ್ರಲ್ ದೇವಾಲಯದಲ್ಲಿ ಭಾನುವಾರ ಸಂತ ಮೇರಿ ಮಾತೆಯ (ವೆಳಾಂಗಣ್ಣಿ ಅದ್ಭುತ ಮಾತೆ)  ಹಬ್ಬಕ್ಕೆ ಚಾಲನೆ ನೀಡಲಾಯಿತು. ಹಬ್ಬ ಎಂಟು ದಿನ ನಡೆಯಲಿದೆ.

ಹಬ್ಬದ ಪ್ರಯುಕ್ತ  ಮೇರಿ ಮಾತೆಯ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ ಪೂಜೆ ಹಾಗೂ ನೊವೆನಾ ಪ್ರಾರ್ಥನೆ ನಡೆಯಿತು. ಸಂಜೆ ಚರ್ಚ್ ನಲ್ಲಿ ವಿಶೇಷ ಪೂಜೆ, ಪಾರ್ಥನೆ ಸಲ್ಲಿಸಲಾಯಿತು. ಚರ್ಚ್ ಆವರಣದಲ್ಲಿ ಜಪಸರ ಮೆರವಣಿಗೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ನರಸಿಂಹರಾಜಪುರದಲ್ಲಿ ಭಾನುವಾರ ಸಂತ ಮೇರಿ ಮಾತೆಯ ಹಬ್ಬದ ಚಾಲನೆ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT