ADVERTISEMENT

ಆನ್‌ಲೈನ್‌ ವಂಚನೆ: ಆ್ಯಪ್‌ ಬಳಕೆ ಬಗ್ಗೆ ಎಚ್ಚರ ಇರಲಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 14:50 IST
Last Updated 27 ಅಕ್ಟೋಬರ್ 2024, 14:50 IST

ಕೊಪ್ಪ: 'ಯುವಜನರು ಅನಗತ್, ಅಸುರಕ್ಷಿತ ಆನ್‌ಲೈನ್‌ ಅಪ್ಲಿಕೇಷನ್‌ ಬಳಕೆಯಿಂದ ಸಮಯ, ಹಣ ಕಳೆದುಕೊಳ್ಳುತ್ತಿರುವುದರ ಜತೆಗೆ, ಕಾನೂನಿನಡಿ ಶಿಕ್ಷೆಗೂ ಒಳಗಾಗುತ್ತಿದ್ದಾರೆ' ಕೊಪ್ಪ ಉಪ ವಿಭಾಗದ ಡಿವೈಎಸ್‌ಪಿ ಎಂ.ಜೆ.ಬಾಲಾಜಿ ಸಿಂಗ್ ಹೇಳಿದರು.

ಬಾಳಗಡಿಯ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಈಚೆಗೆ ನಡೆದ  ‘ಸಾರ್ವಜನಿಕ ಜೀವನದಲ್ಲಿ ಕಾನೂನಿನ ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆನ್‌ಲೈನ್ ವ್ಯವಹಾರಗಳು ಮತ್ತು ಲಿಂಕ್‌ಗಳನ್ನು ಬಳಸುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ, ಮಾಡಿ ಪುಸ್ತಕದ ಜ್ಞಾನಕ್ಕೆ ಹೆಚ್ಚು ಮಹತ್ವ ನೀಡಬೇಕು’ ಎಂದರು.

ADVERTISEMENT

'ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದಾಗ ಸುರಕ್ಷತೆ ಇರುತ್ತದೆ. ಸಂಚಾರಿ ನಿಯಮಗಳು ಸುಗಮ ಸಂಚಾರಕ್ಕೆ ದಾರಿಯೇ ವಿನಹ ಅದು ನಿರ್ಬಂಧವಲ್ಲ’ ಎಂದರು.

ಪ್ರಾಂಶುಪಾಲ ಎಸ್.ಅನಂತ ಅವರು ಮಾತನಾಡಿ, ‘ಆನ್‌ಲೈನ್ ಶಾಪಿಂಗ್‌ನಲ್ಲಿ ವಂಚನೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಪಾಲಿಸಬೇಕಾದ ಕಾನೂನುಗಳ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಕಾನೂನಿನ ಅರಿವಿನಿಂದ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯ' ಎಂದರು.

ಐಕ್ಯೂಎಸಿ ಸಂಚಾಲಕ ನಿರಂಜನ್, ಉಪನ್ಯಾಸಕ ಹರೀಶ ಎಂ.ಆರ್., ಪ್ರಶಾಂತ ಕುಮಾರ್ ಕೆ.ಎಸ್., ಹೆಡ್‌ ಕಾನ್‌ಸ್ಟೆಬಲ್‌ ಸಾದಿಕ್ ಭಾಷಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.