ADVERTISEMENT

ಚಿಕ್ಕಮಗಳೂರು: ಕಡೂರು ತಾಲ್ಲೂಕಿನಲ್ಲಿ ಸರ್ಕಾರಿ ಗೋಶಾಲೆ ಆರಂಭ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 8:43 IST
Last Updated 27 ಜೂನ್ 2022, 8:43 IST
   

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿಯಲ್ಲಿ ಸರ್ಕಾರಿ ಗೋಶಾಲೆ ಆರಂಭಿಸಲಾಗಿದೆ.

ಜಿಲ್ಲೆಗೊಂದು ಸರ್ಕಾರಿ ಗೋಶಾಲೆ ಯೋಜನೆಯಡಿ ರಾಜ್ಯದಲ್ಲಿ ನಿರ್ಮಿಸಿರುವ ಮೊದಲ ಗೋಶಾಲೆ ಇದು ಎಂದು ಪಶುಪಾಲನೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಡಾ.ಪ್ರಕಾಶ್ 'ಪ್ರಜಾವಾಣಿ'ಗೆ ತಿಳಿಸಿದರು.

ಗ್ರಾಮದ ಸರ್ವೆ ನಂಬರ್ 70ರಲ್ಲಿ 11 ಎಕರೆ ಗೋಶಾಲೆ ಜಾಗ ಇದೆ. 2 ಎಕರೆ ಜಾಗದಲ್ಲಿ ಮೇವು ದಾಸ್ತಾನು ಕೊಠಡಿ, ಕಚೇರಿ, ಜಾನುವಾರುಗಳ ಶೆಡ್, ಸುತ್ತ ಕಾಂಪೌಂಡ್ ನಿರ್ಮಿಸಲಾಗಿದೆ. ಬಾಕಿ 9 ಎಕರೆ ಮೇವು ಬೆಳೆಯುವ ಜಾಗ.ಗೋಶಾಲೆಯಲ್ಲಿ 150 ರಾಸುಗಳ ನಿರ್ವಹೆಣೆಗೆ ವ್ಯವಸ್ಥೆ ಇದೆ.

ADVERTISEMENT

ಗೋಶಾಲೆ ನಿರ್ಮಾಣಕ್ಕೆ ₹ 53.5 ಲಕ್ಷ ಮಂಜೂರಾಗಿದ್ದು,₹ 41.5 ಲಕ್ಷ ವೆಚ್ಚದಲ್ಲಿ ಗೋಶಾಲೆ ನಿರ್ಮಿಸಲಾಗಿದೆ. ಪಶುಸಂಗೋಪನೆ ಸಚಿವ ಪ್ರಭು ಚವಾಣ್ ಅವರು ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.