ಚಿಕ್ಕಮಗಳೂರು: ಸ್ವಂತ ಜಮೀನಿನಲ್ಲಿ ಬಿಡಲಾಗಿದ್ದ ಇಟ್ಟಿಗೆಗಳನ್ನು ಅಕ್ರಮ ಎಂದು ಸುಳ್ಳು ದೂರು ದಾಖಲಿಸಿ ಅರಣ್ಯ ಇಲಾಖೆಯಿಂದ ಇಟ್ಟಿಗೆ ಧ್ವಂಸ ಮಾಡಿ, ಕುಟುಂಬಸ್ಥರಿಗೆ ದೌರ್ಜನ್ಯ ಮಾಡಿದ್ದಾರೆ ಎಂದು ಚಿತ್ರಪ್ಪ ಯರಬಾಳ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸ್ವಂತ 2ಎಕರೆ 28 ಗುಂಟೆ ಜಮೀನಿನಲ್ಲಿ ಮನೆ ಕಟ್ಟುವ ಉದ್ದೇಶದಿಂದ ಬಿಡಲಾಗಿದ್ದ ಇಟ್ಟಿಗೆಗಳನ್ನು ಎಸಿಎಫ್ ರತ್ನಪ್ರಭ ಅವರು ಸುಳ್ಳು ದೂರು ದಾಖಲಿಸಿ ದೌರ್ಜ್ಯನ ಮಾಡಿ ಹಾಗೂ ಇಟ್ಟಿಗೆಗಳನ್ನ ಧ್ವಂಸ ಮಾಡಿ ತುಂಬಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಠಾಣೆಗೆ ಬಂದು ವಿಚಾರಿಸಿದರೆ ಒತ್ತುವರಿ ಮಾಡಿ ಕಿರು ಅರಣ್ಯದಲ್ಲಿ ಇಟ್ಟಿಗೆ ಬಿಡಲಾಗಿದೆ ಎಂದು ಆರೋಪಿಸಿ ಸುಳ್ಳು ದೂರು ದಾಖಲಿಸಲಾಗಿದೆ.
ಈ ಸಂಬಂಧ ಎನ್.ಆರ್.ಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದರೆ ಠಾಣಾಧಿಕಾರಿಗಳು ದೂರು ದಾಖಲಿಸಿಕೊಂಡಿಲ್ಲ. ಈ ಕಾರಣಕ್ಕೆ ಎಸ್‌ಪಿ ಅವರಿಗೆ ದೂರು ನೀಡಲಾಗಿದೆ. ಒಂದು ವೇಳೆ ದೂರು ಪರಿಗಣಿಸದಿದ್ದಲ್ಲಿ ಎನ್‌ಆರ್‌ಪುರ ಪೊಲೀಸ್ ಠಾಣೆ ಎದುರು ಕುಟುಂಬ ಸಮೇತ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿರಂತರವಾಗಿ ಅರಣ್ಯ ಇಲಾಖೆಯವರು ಗ್ರಾಮದವರ ಮೇಲೆ ಹಲ್ಲೆ ಮಾಡುವುದರ ಬಗ್ಗೆ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಎಸ್.ಪಿ ಅವರ ಗಮನಕ್ಕೆ ತಂದಿದೇವೆ. ಆದರೂ ಈ ರೀತಿಯ ಪ್ರಕರಣಗಳು ನಡೆಯುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಎಸ್‌ಎಸ್ ಮುಖಂಡ ಶಿವಣ್ಣ, ಜಿಲ್ಲಾ ದೌರ್ಜನ್ಯ ತಡೆ ಸಮಿತಿ ಸದಸ್ಯ ಮಹೇಶ್, ಮುಖಂಡರಾದ ಓಂಪ್ರಕಾಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.