ADVERTISEMENT

ಹೃದ್ರೋಗ ತಪಾಸಣಾ ಶಿಬಿರ; 85ಕ್ಕೂ ಹೆಚ್ಚು ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 16:24 IST
Last Updated 11 ಡಿಸೆಂಬರ್ 2023, 16:24 IST
ಭಾರತೀಯ ವೈದ್ಯಕೀಯ ಸಂಘ ಕೊಪ್ಪ ಶಾಖೆ(ಐಎಂಎ), ಲಯನ್ಸ್ ಕ್ಲಬ್, ಕೊಪ್ಪ ಸಹ್ಯಾದ್ರಿ ಸಹಯೋಗದಲ್ಲಿ ಹೃದ್ರೋಗ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು
ಭಾರತೀಯ ವೈದ್ಯಕೀಯ ಸಂಘ ಕೊಪ್ಪ ಶಾಖೆ(ಐಎಂಎ), ಲಯನ್ಸ್ ಕ್ಲಬ್, ಕೊಪ್ಪ ಸಹ್ಯಾದ್ರಿ ಸಹಯೋಗದಲ್ಲಿ ಹೃದ್ರೋಗ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು   

ಕೊಪ್ಪ: ಭಾರತೀಯ ವೈದ್ಯಕೀಯ ಸಂಘ ಕೊಪ್ಪ ಶಾಖೆ, ಲಯನ್ಸ್ ಕ್ಲಬ್, ಕೊಪ್ಪ ಸಹ್ಯಾದ್ರಿ ಸಹಯೋಗದಲ್ಲಿ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ವತಿಯಿಂದ ಅಮ್ಮಡಿಯಲ್ಲಿನ ವೈದ್ಯರ ಸಮುದಾಯ ಭವನದಲ್ಲಿ  ಹೃದ್ರೋಗ ತಪಾಸಣಾ ಶಿಬಿರ ಭಾನುವಾರ ನಡೆಯಿತು.

ಹೃದ್ರೋಗ ತಜ್ಞ ಕೆ.ಮುಕುಂದ  85ಕ್ಕೂ ಹೆಚ್ಚು ರೋಗಿಗಳ ತಪಾಸಣೆ ನಡೆಸಿದರು. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಇಸಿಜಿ, ಹೃದಯದ ಸ್ಕ್ಯಾನ್ ಪರೀಕ್ಷೆಗಳನ್ನು ನಡೆಸಲಾಯಿತು. ಶಿಬಿರವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಿತು.

ಉಸಿರಾಟದ ತೊಂದರೆ, ಹೃದಯ ಸ್ತಂಭನ ಹಂತದಲ್ಲಿ ವ್ಯಕ್ತಿಯು ಕುಸಿದು ಬಿದ್ದಾಗ ಪುನಶ್ಚೇತನಗೊಳಿಸುವ ಪ್ರಾಥಮಿಕ ಚಿಕಿತ್ಸೆಯ ಕುರಿತು ಮಂಗಳೂರಿನ ಹಾರ್ಟ್ ಸ್ಕ್ಯಾನ್ ಫಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮೇಘನಾ ಮಾಹಿತಿ ನೀಡಿದರು.

ADVERTISEMENT

ಭಾರತೀಯ ವೈದ್ಯಕೀಯ ಸಂಘ ಕೊಪ್ಪ ಶಾಖೆ ಅಧ್ಯಕ್ಷೆ ಡಾ.ಅನಿತಾ ಎನ್.ರಾವ್, ಲಯನ್ಸ್ ಕೊಪ್ಪ ಸಹ್ಯಾದ್ರಿ ಅಧ್ಯಕ್ಷೆ ಸುಮಾ ರಂಗಪ್ಪ, ಕಾರ್ಯದರ್ಶಿ ಡಾ.ಸಾನಿಯಾ ಸಬಾಹಿ, ಡಾ.ಮೋಹನ್ ಬಿ.ಎಸ್.ಶೆಟ್ಟಿ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಂದೀಪ್, ಡಾ.ನಟರಾಜ್, ಡಾ.ಉದಯಶಂಕರ್, ಆದರ್ಶ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.