ADVERTISEMENT

ಕಳಸ ರೋಟರಿ ಸಂಸ್ಥೆಯಿಂದ ನ್ಯಾಪ್‍ಕಿನ್ ಸುಡುವ ಯಂತ್ರದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 12:45 IST
Last Updated 12 ಆಗಸ್ಟ್ 2023, 12:45 IST
ಕಳಸ ರೋಟರಿ ಮತ್ತು ಇನ್ನರ್ ವೀಲ್ ಸಂಸ್ಥೆಯ ಪರವಾಗಿ ಅಧ್ಯಕ್ಷರಾದ ಸಾವಿತ್ರಿ ಜೋಷಿ ಮತ್ತು ಸಂಧ್ಯಾ ರಿತೇಶ್ ಬಸರೀಕಟ್ಟೆ ಸದ್ಗುರು ಶಾಲೆಯ ಆಡಳಿತ ಮಂಡಳಿಗೆ ಶನಿವಾರ ಸಾನಿಟರಿ ನ್ಯಾಪ್‌ಕಿನ್ ಸುಡುವ ಯಂತ್ರ ಹಸ್ತಾಂತರಿಸಿದರು
ಕಳಸ ರೋಟರಿ ಮತ್ತು ಇನ್ನರ್ ವೀಲ್ ಸಂಸ್ಥೆಯ ಪರವಾಗಿ ಅಧ್ಯಕ್ಷರಾದ ಸಾವಿತ್ರಿ ಜೋಷಿ ಮತ್ತು ಸಂಧ್ಯಾ ರಿತೇಶ್ ಬಸರೀಕಟ್ಟೆ ಸದ್ಗುರು ಶಾಲೆಯ ಆಡಳಿತ ಮಂಡಳಿಗೆ ಶನಿವಾರ ಸಾನಿಟರಿ ನ್ಯಾಪ್‌ಕಿನ್ ಸುಡುವ ಯಂತ್ರ ಹಸ್ತಾಂತರಿಸಿದರು   

ಕಳಸ: ಇಲ್ಲಿನ ರೋಟರಿ ಮತ್ತು ಇನ್ನರ್ ವೀಲ್ ಸಂಸ್ಥೆಗಳು ಬಸರೀಕಟ್ಟೆಯ ಸದ್ಗುರು ಶಾಲೆಗೆ ಶನಿವಾರ ಸಾನಿಟರಿ ನ್ಯಾಪ್‌ಕಿನ್ ಸುಡುವ ಯಂತ್ರ ಕೊಡುಗೆ ನೀಡಿದವು.

ರೋಟರಿ ಸಂಸ್ಥೆ ಅಧ್ಯಕ್ಷೆ ಸಾವಿತ್ರಿ ಜೋಷಿ, ಇನ್ನರ್ ವೀಲ್ ಅಧ್ಯಕ್ಷೆ ಸಂಧ್ಯಾ ರಿತೇಶ್ ಈ ಯಂತ್ರವನ್ನು ಶಾಲಾ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು. ರೋಟರಿ ಸಂಸ್ಥೆಯ ಕುಮಾರಸ್ವಾಮಿ, ಕೆ.ಆರ್. ಭಾಸ್ಕರ್, ಪಣೀಶ್, ಸಂದೀಪ್, ಇನ್ನರ್ ವೀಲ್ ಸದಸ್ಯರಾದ ನಿತ್ಯಾ ಸಂದೀಪ್, ಉಷಾ ಕುಮಾರಸ್ವಾಮಿ ಇದ್ದರು.

ಆನಂತರ ನಡೆದ ಕಾರ್ಯಕ್ರಮದಲ್ಲಿ ಡಾ.ಮಾಳವಿಕಾ ಪ್ರಭು, ಶಾಲೆಯ ಹೆಣ್ಣು ಮಕ್ಕಳಿಗೆ ವೈಯಕ್ತಿಕ ಶುಚಿತ್ವದ ಬಗ್ಗೆ ಉಪನ್ಯಾಸ ನೀಡಿದರು.

ADVERTISEMENT

ಹೊರನಾಡಿನಲ್ಲಿ ಮೌಲ್ಯಾಧಾರಿತ ಶಿಕ್ಷಣ ತರಬೇತಿ: ರೋಟರಿ ಸಂಸ್ಥೆಯು ಹೊರನಾಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಮೌಲ್ಯಾಧಾರಿತ ಶಿಕ್ಷಣ ತರಬೇತಿ ಆಯೋಜಿಸಿತ್ತು. ಬೆಂಗಳೂರಿನ ಕರ್ತವ್ಯ ಸರ್ಕಾರೇತರ ಸಂಸ್ಥೆಯ ರಾಕೇಶ್ ಹಾಗೂ ನಾಗಭೂಷಣ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ರೋಟರಿ ಅಧ್ಯಕ್ಷೆ ಸಾವಿತ್ರಿ ಜೋಷಿ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ ಟ್ರಸ್ಟ್ ಸದಸ್ಯೆ ಉಷಾ ರಾಮನಾರಾಯಣ ಜೋಷಿ, ಶಾಲಾ ಶಿಕ್ಷಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.