ADVERTISEMENT

ಅರಣ್ಯ ಭೂಮಿ ಒತ್ತುವರಿ ತೆರವು ವಿರೋಧಿಸಿ ಕಳಸ ಬಂದ್ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 19:41 IST
Last Updated 11 ಸೆಪ್ಟೆಂಬರ್ 2024, 19:41 IST
ಕಳಸ ಪಟ್ಟಣದಲ್ಲಿ ಬೆಳೆಗಾರರು ಬುಧವಾರ ಮೆರವಣಿಗೆ ನಡೆಸಿದರು
ಕಳಸ ಪಟ್ಟಣದಲ್ಲಿ ಬೆಳೆಗಾರರು ಬುಧವಾರ ಮೆರವಣಿಗೆ ನಡೆಸಿದರು   

ಕಳಸ (ಚಿಕ್ಕಮಗಳೂರು): ಅರಣ್ಯ ಭೂಮಿ ಒತ್ತುವರಿ ತೆರವು ವಿರೋಧಿಸಿ ಬೆಳೆಗಾರರ ಸಂಘ ಮತ್ತು ಒತ್ತುವರಿ ಹೋರಾಟ ಸಮಿತಿಯು ಕರೆ ನೀಡಿದ್ದ ‘ಕಳಸ ಬಂದ್’ ಬುಧವಾರ ಯಶಸ್ವಿಯಾಯಿತು.

ಬೆಳಿಗ್ಗೆ ಅಂಗಡಿಗಳು, ಶಾಲಾ–ಕಾಲೇಜುಗಳು ಮುಚ್ಚಿದ್ದವು. ಸಂಜೆ 4ರ ನಂತರ ಅಂಗಡಿಗಳು ತೆರೆದವು. ಕಳಸೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು ಭಾಗವಹಿಸಿದ್ದರು.

‘ಮಲೆನಾಡಿನ ಕಾಫಿ ತೋಟಗಳು ಅರಣ್ಯದ ಸ್ವರೂಪದಲ್ಲೇ ಇವೆ ಎಂದು ಸರ್ಕಾರದ ಗಮನಕ್ಕೆ ತರಲಾಗಿದೆ. ಸದ್ಯಕ್ಕೆ ಯಾವುದೇ ಭೂಮಿ ತೆರವು ಮಾಡದಂತೆ ಅರಣ್ಯ ಸಚಿವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ರಾಜಕೀಯ ಪ್ರೇರಿತ ವದಂತಿ ನಂಬಬಾರದು’ ಎಂದು ಶಾಸಕ ಟಿ.ಡಿ.ರಾಜೇಗೌಡ ಮನವಿ ಮಾಡಿದರು.

ADVERTISEMENT

‘ಅರಣ್ಯ ಅಧಿಕಾರಿಗಳು ರೈತರ ಭೂಮಿ ತೆರವು ಮಾಡುವ ಯತ್ನ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸುತ್ತೇನೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದರು.

ಮುಖಂಡರಾದ ಪ್ರಮೋದ್ ಮಧ್ವರಾಜ್, ದೀಪಕ್ ದೊಡ್ಡಯ್ಯ, ಜಿ.ಕೆ.ಮಂಜಪ್ಪಯ್ಯ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.