ADVERTISEMENT

ಕುಟುಂಬದಿಂದ, ಕುಟುಂಬಕ್ಕಾಗಿ... ಇದು ಜೆಡಿಎಸ್‌ ನೀತಿ: ಸಿ.ಟಿ.ರವಿ ಗೇಲಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 10:33 IST
Last Updated 4 ಮಾರ್ಚ್ 2023, 10:33 IST
ಯುವಸಂಗಮ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿದರು.
ಯುವಸಂಗಮ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿದರು.   

ಚಿಕ್ಕಮಗಳೂರು: ‘ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿಸುವಷ್ಟು ಜನರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕುಟುಂಬದಲ್ಲಿ ಇಲ್ಲ. ಅದ್ಯಾರೋ ಒಬ್ಬರಿಗೆ 36 ಹೆಂಡತಿಯರು, 314 ಮಕ್ಕಳು ಇದ್ದರೆಂದು ಕೇಳಿದ್ದೆ, ಈ ಕುಟುಂಬದಲ್ಲೂ ಅಷ್ಟು ಜನ ಇದ್ದಿದ್ದರೆ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿ ಹುಡುಕಬೇಕಾದ ರಗಳೆಯೇ ಇರುತ್ತಿರಲಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಗೇಲಿ ಮಾಡಿದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಎಐಟಿ ರಂಗಮಂದಿರ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಯುವಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬುದು ಸಂವಿಧಾನ ಆಶಯವಾದರೆ, ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಎಂಬುದು ಜೆಡಿಎಸ್‌ ನೀತಿ. ಜೆಡಿಎಸ್‌ನಲ್ಲಿ ಹಾಸನ ಕ್ಷೇತ್ರದಲ್ಲಿ ಈಗ ಜಗಳ ನಡೆದಿರುವುದು ದೇಶಕ್ಕಾಗಿ ಅಲ್ಲ, ಅಲ್ಲಿನ ಜನರಿಗಾಗಿಯೂ ಅಲ್ಲ, ಕುಟುಂಬಕ್ಕಾಗಿ. ಕುಮಾರಣ್ಣ (ಎಚ್‌ಡಿಕೆ) ಅವರ ಪಾರ್ಟಿಗೂ ದೇಶಕ್ಕೂ ಸಂಬಂಧವೇ ಇಲ್ಲ’ ಎಂದು ಸಿ.ಟಿ.ರವಿ ಅಪಹಾಸ್ಯ ಮಾಡಿದರು.

‘ಕಾಂಗ್ರೆಸ್‌ನವರು ‘ಎಲೆಕ್ಷನ್‌ ಟೈಂ’ ಹಿಂದೂಗಳು. ಕೇಸರಿ, ಕುಂಕಮ ಕಂಡರೆ ಆಗದವರು. ಅವರು ಚುನಾವಣೆ ಸಮಯದಲ್ಲಿ ನಾಟಕವಾಡುವ ಹಿಂದೂಗಳು’ ಎಂದು ಮೂದಲಿಸಿದರು.

ಇವನ್ನೂ ಓದಿ...

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.