ಜಯಪುರ (ಬಾಳೆಹೊನ್ನೂರು): ‘ಶ್ರೀಮಂತರಿಗೆ ಹೆಚ್ಚು ಬಡ್ಡಿ ವಿಧಿಸಿ, ಬಡವರಿಗೆ ಕಡಿಮೆ ಬಡ್ಡಿ ನೀಡುವ ಮೂಲಕ ಬ್ಯಾಂಕ್ ಗಳು ಬಡವರ ನೆರವಿಗೆ ಧಾವಿಸಬೇಕು’ ಎಂದು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಹೇಳಿದರು.
ಬಸ್ ನಿಲ್ದಾಣ ಸಮೀಪದ ನಾಗಲಿಂಗ ಕಾಂಪ್ಲೆಕ್ಸ್‌ಗೆ ಸ್ಥಳಾಂತರಗೊಂಡ ಕರ್ನಾ ಟಕ ಗ್ರಾಮೀಣ ಬ್ಯಾಂಕ್ ಶಾಖೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್‌ಗಳನ್ನು ಆರಂಭಿಸಿ, ಬಡವರಿಗೆ ಉತ್ತಮ ಸೇವೆ ನೀಡಬೇಕು. ಜನ ಸೇವೆಯೇ ಜನಾರ್ದನ ಸೇವೆ ಎಂದು ಸಿಬ್ಬಂದಿ ಕೆಲಸ ನಿರ್ವಹಿಸಬೇಕು. ಮನೆಯಲ್ಲಿ ಹಣ ಇಡುವ ಬದಲು ಬ್ಯಾಂಕ್ ನಲ್ಲಿ ಹಣವನ್ನು ಠೇವಣಿ ಇಡಿ’ ಎಂದು ಸಲಹೆ ನೀಡಿದರು.
ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಗೌರವಿಸಲಾಯಿತು.
ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ವೇದವ್ಯಾಸ್ ಭಟ್, ಗೌರಿಗದ್ದೆ ಟ್ರಸ್ಟ್ ನ ಜಯವಂತ ಭಟ್, ನಾಗಲಿಂಗ ಕಾಂಪ್ಲೆಕ್ಸ್ ಮಾಲೀಕ ಡಿ.ಎನ್.ಚಂದ್ರಶೇಖರ್, ಬ್ಯಾಂಕ್ ಅಧ್ಯಕ್ಷ ಧೀರೇಂದ್ರ, ಬಿ.ಸಿ.ರಚನ, ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಆಶಿಶ್ ಶಾನ್‌ಭಾಗ್ ಕಾಫಿ ಬೆಳೆಗಾರ ಕೌಳಿಯ ಕೆ.ಎಸ್.ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.