ADVERTISEMENT

ನರಸಿಂಹರಾಜಪುರ: ಕೂಸ್ಗಲ್ ಗಿರಿ ಗರುಡ ಕಂಬದ ಮೇಲೆ ಬೆಳಗಿದ ದೀಪ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 5:25 IST
Last Updated 6 ನವೆಂಬರ್ 2024, 5:25 IST
ನರಸಿಂಹರಾಜಪುರ ತಾಲ್ಲೂಕು ಕೂಸ್ಗಲ್ ಗಿರಿಯಲ್ಲಿ ದೀಪಾವಳಿಯ ಪ್ರಯುಕ್ತ  ಗರುಡ ಕಂಬದ ಮೇಲೆ ದೀಪ ಬೆಳೆಗಿಸಿ ಗ್ರಾಮಸ್ಥರು ಪೂಜೆ ಸಲ್ಲಿಸಿದರು
ನರಸಿಂಹರಾಜಪುರ ತಾಲ್ಲೂಕು ಕೂಸ್ಗಲ್ ಗಿರಿಯಲ್ಲಿ ದೀಪಾವಳಿಯ ಪ್ರಯುಕ್ತ  ಗರುಡ ಕಂಬದ ಮೇಲೆ ದೀಪ ಬೆಳೆಗಿಸಿ ಗ್ರಾಮಸ್ಥರು ಪೂಜೆ ಸಲ್ಲಿಸಿದರು   

ನರಸಿಂಹರಾಜಪುರ: ತಾಲ್ಲೂಕಿನ ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಸ್ಗಲ್ ರಂಗನಾಥಸ್ವಾಮಿ ಮತ್ತು ಚನ್ನಮ್ಮ ದೇವಿ ದೇವಸ್ಥಾನದ ವ್ಯಾಪ್ತಿಯಲ್ಲಿರುವ ಕೂಸ್ಗಲ್ ಗಿರಿಯಲ್ಲಿ ದೀಪಾವಳಿ ಅಂಗವಾಗಿ ಗಿರಿಹತ್ತಿ ಗರುಡ ಕಂಬದ ಮೇಲೆ ದೀಪ ಬೆಳಗಿಸುವ ಧಾರ್ಮಿಕ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು.

ಕೂಸ್ಗಲ್ ಬೆಟ್ಟದಲ್ಲಿ ಗಿರಿಸಿದ್ದೇಶ್ವರ ದೇವಸ್ಥಾನ ಹಾಗೂ 35 ಅಡಿ ಎತ್ತರದ ದೀಪಸ್ತಂಭ ಇದೆ. ದೀಪಾವಳಿ ಹಬ್ಬದಲ್ಲಿ ಹಾಗೂ ಕೂಸ್ಗಲ್ ರಂಗನಾಥ ಸ್ವಾಮಿ ಜಾತ್ರೆಯ ಸಮಯದಲ್ಲಿ ದೀಪಸ್ತಂಭದ ಮೇಲೆ ದೀಪ ಹಚ್ಚಲಾಗುತ್ತದೆ.  ದೀಪಾವಳಿಯ ದಿನ ಗ್ರಾಮಸ್ಥರು ಗುಹೆಯ ಬಳಿ ಹೋಗಿ ಪೂಜೆ ಸಲ್ಲಿಸಿ ದನಕರಗಳನ್ನು ಕಾಪಾಡುವಂತೆ ಬೇಡಿಕೊಂಡರು. ದೇವಸ್ಥಾನ ಸಮಿತಿಯ ಅಧ್ಯಕ್ಷರು, ಗ್ರಾಮಸ್ಥರು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT