ಕೊಪ್ಪ: ಹುಲುಮಕ್ಕಿಯಲ್ಲಿನ ದಾಸಮಠದ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಸಂಭ್ರಮದಿಂದ ರಥೋತ್ಸವ ನೇರವೇರಿತು.
ಮಧ್ಯಾಹ್ನ ಮನ್ಮಹಾರಥಾರೋಹಣ ನಡೆಯಿತು. ಭಕ್ತರು ಹರ್ಷೋದ್ಗಾರದಿಂದ ರಥ ಎಳೆದರು. ದೇವರಿಗೆ ಹೂವಿನ ವಿಶೇಷ ಅಲಂಕಾರ ಮಾಡಲಾಗಿದ್ದು, ವಿಶೇಷ ಪೂಜೆ ಜರುದವು. ಭಕ್ತರು ಹಣ್ಣು ಕಾಯಿ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.
ಆದಿಚುಂಚನಗಿರಿಯ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಆದಿಚುಂಚನಗಿರಿಯ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಲಹಾ ಸಮಿತಿ ಅಧ್ಯಕ್ಷ ಕೋಡ್ರು ಶ್ರೀನಿವಾಸ್ ಇದ್ದರು.
ಮೇ 4ರಂದು ಅಭಿಷೇಕ, ಕುಂಕುಮೋತ್ಸವ, ಅವಭೃತ, ಮಹಾಮಂಗಳಾರತಿ, ರಾತ್ರಿ ಪಲ್ಲಕ್ಕಿ ಉತ್ಸವ ನಡೆಯಲಿದ್ದು, 5ರಂದು ಸಂಪ್ರೋಕ್ಷಣೆ, ಗಂಗಾ ಪೂಜೆ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.