ADVERTISEMENT

ಚಿಕ್ಕಮಗಳೂರು | ಕಂದಾಯ ನಿರೀಕ್ಷಕ ಕಿರಣ್ ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 12:55 IST
Last Updated 23 ಡಿಸೆಂಬರ್ 2021, 12:55 IST
ಕಿರಣ್
ಕಿರಣ್   

ಕೊಪ್ಪ: ಜಮೀನಿನ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ತಾಲ್ಲೂಕು ಆಡಳಿತ ಸೌಧದಲ್ಲಿ ಗುರುವಾರ ಮಹಿಳೆಯಿಂದ ಲಂಚ ಪಡೆಯುತ್ತಿದ್ದಾಗ ಹರಿಹರಪುರ ಕಂದಾಯ ನಿರೀಕ್ಷಕ ಕಿರಣ್ ಎಂಬುವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಹರಿಹರಪುರದಲ್ಲಿ ತಮ್ಮ ಜಮೀನಿನ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಟಿ.ಕೆ.ಯಶ್ವಿತಾ ಎಂಬ ಮಹಿಳೆಯು ಕಂದಾಯ ನಿರೀಕ್ಷಕ ಕಿರಣ್ ಅವರನ್ನು ಸಂಪರ್ಕಿಸಿದ್ದರು. ದಾಖಲೆ ಮಾಡಿಕೊಡುವುದಾಗಿ ಹೇಳಿದ ಕಂದಾಯ ನಿರೀಕ್ಷಕ ₹ 8 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು.

ಈಗಾಗಲೇ ಕಿರಣ್, ಮಹಿಳೆಯಿಂದ ₹ 2 ಸಾವಿರ ಪಡೆದುಕೊಂಡಿದ್ದರು. ಗುರುವಾರ ತಾಲ್ಲೂಕು ಆಡಳಿತ ಸೌಧದಲ್ಲಿ ₹ 6 ಸಾವಿರ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಕಿರಣ್ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ADVERTISEMENT

ಎಸಿಬಿ ಡಿವೈಎಸ್ಪಿ ಸಿ.ಆರ್.ಗೀತಾ ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಎನ್.ಮಂಜುನಾಥ್, ಅನಿಲ್ ಕೆ.ಜಿ.ರಾಥೋಡ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.