ADVERTISEMENT

ಕುದುರೆಮುಖ ಅಭಿವೃದ್ಧಿಗೆ ₹ 5 ಕೋಟಿ ಅನುದಾನ: ಜಿ.ಬಿ ಧರ್ಮಪಾಲ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2022, 4:59 IST
Last Updated 15 ಅಕ್ಟೋಬರ್ 2022, 4:59 IST
ಜಿ.ಬಿ ಧರ್ಮಪಾಲ್
ಜಿ.ಬಿ ಧರ್ಮಪಾಲ್   

ಮೂಡಿಗೆರೆ: ಕಳಸ ತಾಲ್ಲೂಕಿನ ಕುದುರೆಮುಖ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಐದು ಕೋಟಿ ಅನುದಾನ ಒದಗಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಬಿ ಧರ್ಮಪಾಲ್ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುದುರೆಮುಖ ಪಟ್ಟಣ ಪಂಚಾಯಿತಿಯು ಮೂಡಿಗೆರೆ ಪಟ್ಟಣ ಪಂಚಾಯಿತಿ ಆಡಳಿತ ವ್ಯಾಪ್ತಿಗೊಳಪಟ್ಟಿದ್ದು, ಅಭಿವೃದ್ಧಿ ಕಾಮಗಾರಿಗಳಿಗಾಗಿ ಐದು ಕೋಟಿಯನ್ನು ಮೀಸಲಿಟ್ಟು ಯೋಜನೆ ರೂಪಿಸಲಾಗಿದೆ ಎಂದರು.

‘ಕುದುರೆಮುಖ ಅಧಿಸೂಚಿತ ನಿರಾಶ್ರಿತರಿಗೆ ನಿವೇಶನದ ಜಾಗ ಅಭಿವೃದ್ಧಿ ಪಡಿಸಲು ₹60 ಲಕ್ಷ, ಕುದುರೆಮುಖ ಶಿವ ದೇವಾಲಯದ ಬಳಿ ಸಭಾಭವನ ಹಾಗೂ ಶೌಚಾಲಯ ನಿರ್ಮಾಣಕ್ಕೆ ₹50 ಲಕ್ಷ, ಜಾಂಬಳೆ ವಸತಿ ಪ್ರದೇಶಕ್ಕೆ ವಿದ್ಯುತ್ ದೀಪ ಅಳವಡಿಕೆಗೆ ₹15 ಲಕ್ಷ, ಜಾಂಬಳೆ ಕಾಲೊನಿಯಲ್ಲಿ ಕಾಂಕ್ರಿಟ್ ರಸ್ತೆಗೆ ₹50 ಲಕ್ಷ, ಜಾಂಬಳೆ ಸಭಾಭವನಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಲು ₹50 ಲಕ್ಷ, ಸಂಸೆ ಮೂರ್ನಾಡು ಮಲ್ಲೇಶ್ವರ ದೇವಾಲಯ ದುರಸ್ತಿ ₹1ಕೋಟಿ, ಜಾಂಬಳೆ ಕುಡಿಯುವ ನೀರಿನ ಚೆಕ್ ಡ್ಯಾಂಗೆ ₹20 ಲಕ್ಷ, ವಿನೋಬನಗರ ಕಾಲೊನಿಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿ ₹20 ಲಕ್ಷ, ದೇವಾಲಯ ಕಾಂಪೌಂಡ್ ಹಾಗೂ ಇಂಟರ್ ಲಾಕ್ ಅಳವಡಿಕೆ ₹50 ಲಕ್ಷ, ಭಗವತಿ ದೇವಾಲಯದಲ್ಲಿ ಊಟದಹಾಲ್ ಹಾಗೂ ಶೌಚಾಲಯ ₹30 ಲಕ್ಷ, ಕುದುರೆಮುಖ ಪ್ರೌಢಶಾಲೆ ಚಾವಣಿ ದುರಸ್ತಿ ಹಾಗೂ ಶೌಚಾಲಯ ನಿರ್ಮಾಣ ₹30 ಲಕ್ಷ, ಕುದುರೆಮುಖ ಟೌನ್ ಶಿಪ್ ಗೆ ಹೋಗುವ ರಸ್ತೆಗೆ ಡಾಂಬರೀಕರಣಕ್ಕೆ ₹50 ಲಕ್ಷ ಸೇರಿದಂತೆ ಐದು ಕೋಟಿ ಅನುದಾನವನ್ನು ಮೀಸಲಿರಿಸಲಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.