ADVERTISEMENT

ಕೊಟ್ಟಿಗೆಹಾರ: ಮೆಸ್ಕಾಂ ಸಿಬ್ಬಂದಿಗೆ ಏಣಿ ಕೊಡುಗೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 15:33 IST
Last Updated 9 ಜುಲೈ 2024, 15:33 IST
ನಮ್ಮೂರು ಕೊಟ್ಟಿಗೆಹಾರ ವಾಟ್ಸ್‌ಆ್ಯಪ್ ಗ್ರೂಪ್ ವತಿಯಿಂದ ಮೆಸ್ಕಾಂ ಸಿಬ್ಬಂದಿಗೆ ಅಲ್ಯುಮಿನಿಯಂ ಏಣಿಯನ್ನು ಕೊಡುಗೆಯಾಗಿ ನೀಡಲಾಯಿತು
ನಮ್ಮೂರು ಕೊಟ್ಟಿಗೆಹಾರ ವಾಟ್ಸ್‌ಆ್ಯಪ್ ಗ್ರೂಪ್ ವತಿಯಿಂದ ಮೆಸ್ಕಾಂ ಸಿಬ್ಬಂದಿಗೆ ಅಲ್ಯುಮಿನಿಯಂ ಏಣಿಯನ್ನು ಕೊಡುಗೆಯಾಗಿ ನೀಡಲಾಯಿತು   

ಕೊಟ್ಟಿಗೆಹಾರ: ಮಲೆನಾಡಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ವಿದ್ಯುತ್ ಸೇವೆ ಒದಗಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ‘ನಮ್ಮೂರು ಕೊಟ್ಟಿಗೆಹಾರ’ ವಾಟ್ಸ್‌ಆ್ಯಪ್‌ ಗ್ರೂಪ್ ವತಿಯಿಂದ ಮೆಸ್ಕಾಂಗೆ ಅಲ್ಯುಮಿನಿಯಂ ಏಣಿಯನ್ನು ಕೊಡುಗೆಯಾಗಿ ನೀಡಲಾಯಿತು.

ಗ್ರೂಪ್ ಸದಸ್ಯರಾದ ತನು, ಸಂಜಯ್ ಗೌಡ ಮಾತನಾಡಿ, ‘ಮಳೆಗಾಲದಲ್ಲಿ ಕೊಟ್ಟಿಗೆಹಾರ ವಿದ್ಯುತ್ ಸೌಲಭ್ಯದಿಂದ ವಂಚಿತವಾಗುತ್ತದೆ. ಮೆಸ್ಕಾಂ ಸಿಬ್ಬಂದಿ ಮಳೆಗಾಲದಲ್ಲಿ ಕಂಬ ಹತ್ತಿ ಕಾರ್ಯ ನಿರ್ವಹಿಸುವುದು ಕಷ್ಟಸಾಧ್ಯ. ಹಾಗಾಗಿ ಗ್ರೂಪ್ ಸದಸ್ಯರು ವಂತಿಗೆ ಹಾಕಿ ₹3,600 ಬೆಲೆ ಬಾಳುವ 20 ಅಡಿ ಎತ್ತರದ ಏಣಿಯನ್ನು ನೀಡಿದ್ದೇವೆ. ಇದರ ಸಹಾಯದಿಂದ ಕಂಬ ಹತ್ತಿ ವಿದ್ಯುತ್ ದುರಸ್ತಿ ಮಾಡಲು ಸಿಬ್ಬಂದಿಗೆ ಸಹಕಾರಿಯಾಗಿದೆ’ ಎಂದರು.

ಮೆಸ್ಕಾಂ ಸಿಬ್ಬಂದಿ ದೀಪಕ್, ಪವನ್, ಶಶಿ, ಮುಖಂಡರಾದ ತನು ಕೊಟ್ಟಿಗೆಹಾರ, ಸಂಜಯ್, ಕೃಷ್ಣಮೂರ್ತಿ, ವೀರಪ್ಪಗೌಡ, ರಾಜು ರೆಡ್ ಚೆಲ್ಲಿ, ಸಂತೋಷ್ ಅತ್ತಿಗೆರೆ, ನಾಗರಾಜ್ ಆಚಾರ್ಯ, ಅನಿಲ್ ಅತ್ತಿಗೆರೆ, ಎ.ಆರ್.ಅಭಿಲಾಷ್, ರಘು ಅತ್ತಿಗೆರೆ, ಜೀಯಾ, ವಿಕ್ರಂ ಗೌಡ, ಆದರ್ಶ್ ತರುವೆ, ಬೇಬಿ ಪಿ.ಜಿ, ಅಶೋಕ್ ಮಲ್ಲಂದೂರು, ಪ್ರಶಾಂತ್ ತರುವೆ, ಎ.ಎಂ.ಹಸೇನ, ಬಿ.ಎಂ.ಸುರಕ್ಷಿತ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.