ADVERTISEMENT

ನರಸಿಂಹರಾಜಪುರ: ಲೋಕ ಅದಾಲತ್‌ನಲ್ಲಿ ಒಂದಾದ ಜೋಡಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 14:00 IST
Last Updated 16 ಸೆಪ್ಟೆಂಬರ್ 2024, 14:00 IST
ನರಸಿಂಹರಾಜಪುರದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಜ್ಯೋತಿ ಮತ್ತು ನಾಗರಾಜ್ ದಂಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ರಾಜಿ  ಸಂಧಾನದ ಮೂಲಕ ಒಂದಾದರು
ನರಸಿಂಹರಾಜಪುರದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಜ್ಯೋತಿ ಮತ್ತು ನಾಗರಾಜ್ ದಂಪತಿ ನ್ಯಾಯಾಧೀಶರ ಸಮ್ಮುಖದಲ್ಲಿ ರಾಜಿ  ಸಂಧಾನದ ಮೂಲಕ ಒಂದಾದರು   

ನರಸಿಂಹರಾಜಪುರ: ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ದಂಪತಿ ರಾಜಿ ಸಂಧಾನದ ಮೂಲಕ ಮತ್ತೆ ಒಂದಾದರು.

ಕೂಗ್ರೆ ಮೂಲದ ಜ್ಯೋತಿ ಹಾಗೂ ನಾಗರಾಜ್ ದಂಪತಿ 2019ರಲ್ಲಿ ವಿವಾಹ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿ ಪ್ರತ್ಯೇಕವಾಗಿ ವಾಸವಾಗಿದ್ದರು.ಜ್ಯೋತಿ ಅವರ ಪರ ಜಿ.ಮಮತಾ ಹಾಗೂ ನಾಗರಾಜ್ ಪರ ಬಿ.ಬಿ.ಆದಿತ್ಯ ವಕಾಲತ್ತು ವಹಿಸಿದ್ದರು.  ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರಾದ ಕೆ.ಟಿ.ರಘುನಾಥಗೌಡ ಹಾಗೂ ದಾಸರಿ ಕ್ರಾಂತಿಕಿರಣ್ ಅವರ ಸಮ್ಮುಖದಲ್ಲಿ ಜ್ಯೋತಿ ಹಾಗೂ ನಾಗರಾಜ್ ರಾಜಿ ಸಂಧಾನದ ಮೂಲಕ ಒಂದಾದರು.

ಸರ್ಕಾರಿ ವಕೀಲ ಗದಿಗೆಪ್ಪ ನೇಕಾರ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎ.ಸಾಜು, ವಕೀಲರಾದ ಎಸ್.ಎಸ್.ಸಂತೋಷ್ ಕುಮಾರ್, ಜಿ.ದಿವಾಕರ್, ಬಸವರಾಜು, ಸುಜಯ್ ಮತ್ತಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.