ADVERTISEMENT

ಮೂಡಿಗೆರೆಯಲ್ಲಿ ‘ಮಲೆನಾಡ ಹಬ್ಬ’

40ಕ್ಕೂ ಅಧಿಕ ಉತ್ಪನ್ನಗಳ ಸ್ಟಾಲ್‌ಗಳ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:28 IST
Last Updated 26 ಅಕ್ಟೋಬರ್ 2024, 15:28 IST
ಮೂಡಿಗೆರೆಯ ರೈತ ಭವನದಲ್ಲಿ ಶ್ರೀಸಾಯಿ ಗ್ರೂಪ್ ವತಿಯಿಂದ ನಡೆದ ‘ಮಲೆನಾಡು ಹಬ್ಬ’ ಕಾರ್ಯಕ್ರಮದ ಉದ್ಘಾಟನೆಯನ್ನು ಒಕ್ಕಲಿಗರ ಮಹಿಳಾ ಸಂಘದ ತಾಲ್ಲೂಕು ಅಧ್ಯಕ್ಷೆ ಕಲಾವತಿ ಕೆಂಬತ್ಮಕ್ಕಿ ನೆರವೇರಿಸಿದರು. ಉಪಾಧ್ಯಕ್ಷೆ ಮೀನಾಕ್ಷಿ, ಅನ್ನಪೂರ್ಣ ನರೇಶ್, ಶೀಲಾ ಸುಂದರೇಶ್, ಸೋಫಿಯಾ ಸುರೇಶ್, ವೀಣಾ ರತ್ನಾಕರ್, ಭಾರತಿ ಚಂದ್ರಶೇಖರ್ ಭಾಗವಹಿಸಿದ್ದರು
ಮೂಡಿಗೆರೆಯ ರೈತ ಭವನದಲ್ಲಿ ಶ್ರೀಸಾಯಿ ಗ್ರೂಪ್ ವತಿಯಿಂದ ನಡೆದ ‘ಮಲೆನಾಡು ಹಬ್ಬ’ ಕಾರ್ಯಕ್ರಮದ ಉದ್ಘಾಟನೆಯನ್ನು ಒಕ್ಕಲಿಗರ ಮಹಿಳಾ ಸಂಘದ ತಾಲ್ಲೂಕು ಅಧ್ಯಕ್ಷೆ ಕಲಾವತಿ ಕೆಂಬತ್ಮಕ್ಕಿ ನೆರವೇರಿಸಿದರು. ಉಪಾಧ್ಯಕ್ಷೆ ಮೀನಾಕ್ಷಿ, ಅನ್ನಪೂರ್ಣ ನರೇಶ್, ಶೀಲಾ ಸುಂದರೇಶ್, ಸೋಫಿಯಾ ಸುರೇಶ್, ವೀಣಾ ರತ್ನಾಕರ್, ಭಾರತಿ ಚಂದ್ರಶೇಖರ್ ಭಾಗವಹಿಸಿದ್ದರು   

ಮೂಡಿಗೆರೆ: ‘ಮಹಿಳೆಯರು ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಂಡು ಉದ್ಯಮಿಗಳಾಗಲು ಅವರಲ್ಲಿ ಆತ್ಮವಿಶ್ವಾಸ ತುಂಬುವುದೇ ಮುಖ್ಯ ಉದ್ದೇಶವಾಗಿದೆ’ ಎಂದು ಮೂಡಿಗೆರೆ ತಾಲ್ಲೂಕು ಒಕ್ಕಲಿಗರ ಸಂಘದ ಮಹಿಳಾ ಅಧ್ಯಕ್ಷೆ ಕಲಾವತಿ ಕೆಂಬತ್ಮಕ್ಕಿ ಹೇಳಿದರು.

ಮೂಡಿಗೆರೆ ರೈತ ಭವನದಲ್ಲಿ ಶ್ರೀಸಾಯಿ ಗ್ರೂಪ್ ವತಿಯಿಂದ ಆಯೋಜಿಸಿದ್ದ ‘ಮಲೆನಾಡ ಹಬ್ಬ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಹಿಳೆಯರು ಸಬಲೀಕರಣಗೊಂಡು ಉದ್ಯಮ ನಡೆಸುವ ಹಂತಕ್ಕೆ ತಲುಪಿದ್ದಾರೆ. ಆದರೆ, ಆತ್ಮವಿಶ್ವಾಸದ ಕೊರತೆಯಿಂದ ಉದ್ಯೋಗದಲ್ಲಿ ಸಾರ್ಥಕತೆ ಪಡೆಯಲು ಹಿಂದೇಟು ಹಾಕುವಂತಾಗಿದೆ. ಪುರುಷರಂತೆ ಮಹಿಳೆಯರೂ ಕೂಡ ಸಮಾನರಂತೆ ಕಂಡು ಅವರ ಉದ್ಯಮ ಪ್ರೋತ್ಸಾಹಿಸುವ ಕಾರ್ಯ ಇಂದಿನ ಪರಿಸ್ಥಿತಿಯಲ್ಲಿ ಅಗತ್ಯವಾಗಿದೆ’ ಎಂದರು.

ADVERTISEMENT

ಉದ್ಘಾಟಿಸಿ ಮಾತನಾಡಿದ ಸಂಘದ ಉಪಾಧ್ಯಕ್ಷೆ ಮೀನಾಕ್ಷಿ ಲಕ್ಷ್ಮಣ್ ಗೌಡ ಮಾತನಾಡಿ, ‘ಮಹಿಳಾ ಉದ್ಯಮಿಗಳನ್ನು ಒಂದೆಡೆ ಸೇರಿಸಿ ಅವರ ಉತ್ಪನ್ನಗಳನ್ನು ಮಲೆನಾಡು ಹಬ್ಬದಲ್ಲಿ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಬೆಂಬಲ ನೀಡಿ ಅಭಿವೃದ್ಧಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಬದುಕು ಕಟ್ಟಿಕೊಳ್ಳುವ ಮಹಿಳಾ ಉದ್ಯಮಿಗಳಿಗೆ ಮಲೆನಾಡು ಹಬ್ಬ ಸ್ಫೂರ್ತಿ ನೀಡಿದೆ’ ಎಂದರು.

ವಿವಿಧ ಸೀರೆಗಳು, ಉಡುಗೆ–ತೊಡುಗೆ, ಆಹಾರ ಪದಾರ್ಥಗಳು, ಚಿನ್ನದ ಆಭರಣ ಮಳಿಗೆ, ಯಾಂತ್ರಿಕತೆಯ ಕೃಷಿ ಉಪಕರಣ, ಚನ್ನಪಟ್ಟಣದ ಗೊಂಬೆಗಳು ಹೀಗೆ ಹತ್ತು ಹಲವು ಉತ್ಪನ್ನಗಳು ಮಳಿಗೆಯಲ್ಲಿ ಕಂಡು ಬಂದವು. 40ಕ್ಕೂ ಅಧಿಕ ಉತ್ಪನ್ನಗಳ ಸ್ಟಾಲ್‌ಗಳನ್ನು ಹಾಕಲಾಗಿದ್ದು, ತಮಿಳುನಾಡು, ಕೋಲ್ಕತ್ತ, ಮೈಸೂರು, ಬೆಂಗಳೂರು, ಶಿವಮೊಗ್ಗ, ಮಂಗಳೂರು, ಶೃಂಗೇರಿ, ಮೂಡಿಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಮಹಿಳಾ ಉದ್ಯಮಿಗಳು ಭಾಗವಹಿಸಿದ್ದರು.

ಮಹಿಳಾ ಸಂಘದ ಪದಾಧಿಕಾರಿಗಳಾದ ಅನ್ನಪೂರ್ಣ ನರೇಶ್, ಶೀಲಾ ಸುಂದರೇಶ್, ಸೋಫಿಯಾ ಸುರೇಶ್, ವೀಣಾ ರತ್ನಾಕರ್, ಭಾರತಿ ಚಂದ್ರಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.