ADVERTISEMENT

ಯುವಕನಲ್ಲಿ ಮಂಗನಕಾಯಿಲೆ ಪತ್ತೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 21:46 IST
Last Updated 24 ಜನವರಿ 2023, 21:46 IST
   

ಚಿಕ್ಕಮಗಳೂರು: ಜಿಲ್ಲೆಯ ಬಾಳೆ ಹೊನ್ನೂರು ಸಮೀಪದ ಹಲಸೂರು ರಸ್ತೆ ಭಾಗದ ತೋಟದ ಕಾರ್ಮಿಕರೊಬ್ಬರಿಗೆ (27 ವರ್ಷ ವಯಸ್ಸು) ಮಂಗನಕಾಯಿಲೆ (ಕೆಎಫ್‌ಡಿ) ದೃಢಪಟ್ಟಿದ್ದು, ಚಿಕಿತ್ಸೆ ಪಡೆದಿದ್ದಾರೆ.

ಕೊಪ್ಪ ತಾಲ್ಲೂಕಿನ ಜೋಗಿಮಕ್ಕಿ ಪ್ಲಾಂಟೇಷನ್‌ ಭಾಗದಲ್ಲಿ ಕೆಲಸಕ್ಕೆ ಹೋಗಿ ದ್ದಾಗ ಯುವಕನಿಗೆ ಜ್ವರ, ಸುಸ್ತು ಬಾಧಿ ಸಿತ್ತು. ಪಕ್ಕದ ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆದಿದ್ದಾರೆ.

‘ಯುವಕನ ರಕ್ತ ಪರೀಕ್ಷೆ ವರದಿ ಇದೇ 21ರಂದು ಕೈಸೇರಿದ್ದು, ಕೆಎಫ್‌ಡಿ ದೃಢಪಟ್ಟಿದೆ. ಯುವಕ ತೀರ್ಥಹಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖ ರಾಗಿ ಮನೆಯಲ್ಲಿ ಇದ್ದಾರೆ. ಪ್ಲಾಂಟೇಷನ್‌ ಭಾಗದಲ್ಲಿ ಇಬ್ಬರಿಗೆ ಜ್ವರ ಕಂಡುಬಂದಿದೆ. ರಕ್ತ, ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ. ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.