ಚಿಕ್ಕಮಗಳೂರು: ಮಾನಸ ಸರೋವರ ಯಾತ್ರಿಕರ ತಂಡದ ಜೊತೆ ಸಂಪರ್ಕಾಧಿಕಾರಿಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ತೆರಳಿದ್ದಾರೆ.
63 ಯಾತ್ರಿಕರ ತಂಡವು ಬುಧವಾರ ಹೊರಡಲಿದೆ. ಲೈಸನ್ ಅಧಿಕಾರಿಯಾಗಿ ಅಣ್ಣಾಮಲೈ ಕಾರ್ಯನಿರ್ವಹಿಸಲಿದ್ದಾರೆ. 22 ದಿನ ಯಾತ್ರಿಕರೊಂದಿಗೆ ಇದ್ದು, ಮಾರ್ಗದರ್ಶನ ನೀಡಲಿದ್ದಾರೆ. ಅಣ್ಣಾಮಲೈ ಅವರಿಗೆ ಚಾರಣದಲ್ಲಿ ಅನುಭವ ಇದೆ. ಆಗಸ್ಟ್್ 8 ರಂದು ಚಿಕ್ಕಮಗಳೂರಿಗೆ ಮರಳಲಿದ್ದಾರೆ.
ನಕ್ಸಲ್ ನಿಗ್ರಹ ದಳ ಎಸ್ಪಿ ಲಕ್ಷ್ಮಿಪ್ರಸಾದ್ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹೊಣೆಗಾರಿಕೆ ವಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.