ADVERTISEMENT

ಎಸ್‌ಎಸ್‌ಎಲ್‌ಸಿ: ಮೌಲ್ಯಾಗೆ ಮೊದಲ ಸ್ಥಾನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 14:58 IST
Last Updated 11 ಜುಲೈ 2024, 14:58 IST
ಮೌಲ್ಯಾ ಡಿ.
ಮೌಲ್ಯಾ ಡಿ.   

ತರೀಕೆರೆ: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ 1 ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ ಪಟ್ಟಣದ ಅರುಣೋದಯ ಶಾಲೆಯ ವಿದ್ಯಾರ್ಥಿನಿ ಮೌಲ್ಯಾ ಡಿ. 13 ಅಂಕಗಳು ಹೆಚ್ಚುವರಿಯಾಗಿ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಹಾಗೂ ರಾಜ್ಯಕ್ಕೆ 5ನೇ ಸ್ಥಾನ ಗಳಿಸಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ.ಜಿ.ಎಚ್.ಶ್ರೀಹರ್ಷ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷೆಯಲ್ಲಿ ಮೌಲ್ಯಾಗೆ 608 ಅಂಕ ಬಂದಿತ್ತು. ಮರು ಮೌಲ್ಯಮಾಪನದಲ್ಲಿ 13 ಅಂಕ ಹೆಚ್ಚುವರಿಯಾಗಿ ಬಂದಿದ್ದು, 621 ಅಂಕ ಪಡೆದಿದ್ದಾಳೆ. ಮತ್ತೊಬ್ಬ ವಿದ್ಯಾರ್ಥಿನಿ ಶ್ರಾವ್ಯ ಟಿ.ಎಸ್. ಮೊದಲು 610 ಅಂಕಗಳನ್ನು ಪಡೆದಿದ್ದು, ಮರು ಮೌಲ್ಯಮಾಪನದಿಂದ 8 ಅಂಕ ಹೆಚ್ಚುವರಿಯಾಗಿ ಬಂದಿದ್ದು, 618 ಅಂಕ ಪಡೆದು ತಾಲ್ಲೂಕಿಗೆ ಎರಡನೇ ಸ್ಥಾನ ಪಡೆದಿದ್ದಾಳೆ.

ಮೌಲ್ಯಾ ಅವರು ಶಿಕ್ಷಕ ದೇವೇಂದ್ರಪ್ಪ ಆರ್., ಹಾಗೂ ಲೀಲಾವತಿ ಕೆ.ಆರ್. ಅವರ ಪುತ್ರಿ. ಶ್ರಾವ್ಯಾ ಅವರು ಶಿಕ್ಷಕ ಟಿ.ಎಸ್.ನಾಗರಾಜ್ ಮತ್ತು ಶಿಕ್ಷಕಿ ಮಾನಸಾ ಎಚ್.ಪಿ. ಅವರ ಪುತ್ರಿ.

ADVERTISEMENT
ಶ್ರಾವ್ಯಾ ಟಿ.ಎನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.