ADVERTISEMENT

ಮೂಡಿಗೆರೆ: ವಿವಿಧೆಡೆ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 14:31 IST
Last Updated 27 ಜೂನ್ 2024, 14:31 IST
ಮಳೆ
ಮಳೆ   

ಮೂಡಿಗೆರೆ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ತಡರಾತ್ರಿಯಿಂದ ಗುರುವಾರ ಬೆಳಿಗ್ಗೆವರೆಗೂ ಧಾರಾಕಾರವಾಗಿ ಮಳೆ ಸುರಿಯಿತು.

ಬುಧವಾರ ಹಗಲಿನಲ್ಲಿ ಬಿಡುವು ನೀಡಿದ್ದ ಮಳೆಯು ರಾತ್ರಿ 10ರ ಬಳಿಕ ಬಿಡುವಿಲ್ಲದಂತೆ ಸುರಿಯಿತು. ಗುರುವಾರ ಹಗಲಿನಲ್ಲಿ ಆಗೊಮ್ಮ, ಈಗೊಮ್ಮೆ ಬಿಟ್ಟು ಬಿಟ್ಟು ಮಳೆ ಸುರಿಯಿತು. ಉತ್ತಮ ಮಳೆಯಿಂದ ಹೇಮಾವತಿ ನದಿಯಲ್ಲಿ ಗುರುವಾರ ಬೆಳಿಗ್ಗೆ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದು, ಸಂಜೆ ವೇಳೆಗೆ ಮತ್ತೆ  ಇಳಿಮುಖವಾಗಿತ್ತು.

ಗೋಣಿಬೀಡು ಹೋಬಳಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಹೊಸ್ಕೆರೆ, ಭೈರಾಪುರ ಭಾಗದಲ್ಲಿ 16.4 ಸೆಂ.ಮೀ, ಮಳೆಯಾಗಿದೆ. ಗುರುವಾರ ಸಂಜೆಗೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಗೋಣಿಬೀಡುವಿನಲ್ಲಿ  6.2 ಸೆಂ.ಮೀ, ಜಾವಳಿಯಲ್ಲಿ  8.5 ಸೆಂ.ಮೀ, ಹೊಸ್ಕೆರೆಯಲ್ಲಿ 16.4 ಸೆಂ.ಮೀ ಬಿಳ್ಳೂರಿನಲ್ಲಿ 15.04 ಸೆಂ.ಮೀನಷ್ಟು ಮಳೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.