ಚಿಕ್ಕಮಗಳೂರು: ಜಿಲ್ಲೆಯ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಆರ್ಕಿಡ್ ಜಾತಿಯ (ಸೇಡನ್ ಫಡೇನಿಯಾ ಸೆಲಿಮಿ) ಸಸ್ಯ ಕಂಡುಬಂದಿದೆ.
ಅರಣ್ಯ ಇಲಾಖೆ ವಾಹನ ಚಾಲಕ ಮಂಜುನಾಥ್ ಅವರು ಈಚೆಗೆ ಈ ವಿಶಿಷ್ಟ ವಿಶಿಷ್ಟ ಆರ್ಕಿಡ್ ಸಸ್ಯ (ಸೀತಾಳೆ ಹೂವಿನ ಪ್ರಭೇದ) ಪತ್ತೆ ಮಾಡಿದ್ದಾರೆ ಎಂದು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
ಇದು ವೈಬಿಯಾ ಪ್ರಭೇದದ ಸಸ್ಯವಾಗಿದೆ. ತೇವಾಂಶಭರಿತ ಶೋಲಾ ಅರಣ್ಯದಲ್ಲಿ ಈ ಸಸ್ಯ ಹುಟ್ಟುತ್ತದೆ. ಡಿಸೆಂಬರ್‌ನಲ್ಲಿ ಚಿಗುರಿ, ಫೆಬ್ರುವರಿಯಲ್ಲಿ ಹೂವು ಬಿಡುತ್ತದೆ.
ಪಶ್ಚಿಮ ಘಟ್ಟದ ಹೊಸ ಸಸ್ಯ ಪ್ರಭೇದ ಇದು. ಕೇರಳ ವೈಯನಾಡಿನಲ್ಲಿ ಈ ಹಿಂದೆ ಪತ್ತೆಯಾಗಿತ್ತು. ವಿಜ್ಞಾನಿ ಡಾ.ಕೆ.ವಿ.ಜಾರ್ಜ್ ಎಮರಿಟ್ ಪತ್ತೆ ಮಾಡಿದ್ದರು.
ಚಾಲಕ ಮಂಜುನಾಥ್ ಅವರು ಸಸ್ಯಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ವಿಶಿಷ್ಟ ಸಸ್ಯಗಳನ್ನು ಗುರುತಿಸುವ ಹವ್ಯಾಸ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.