ಕೊಪ್ಪ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಈ ಬಾರಿ ವಿಶೇಷವಾಗಿ ಫಲಾನುಭವಿಗಳೇ ನರೇಗಾ ಯೋಜನೆಯ ಕ್ಯೂಆರ್ ಕೋಡ್ ಬಳಸಿ ಕಾಮಗಾರಿ ಹೆಸರು ನಮೂದಿಸಿಕೊಳ್ಳಬಹುದಾಗಿದೆ.
ನರೇಗಾ ಯೋಜನೆಯ 2025-26 ನೇ ಸಾಲಿನ ಕ್ರಿಯಾ ಯೋಜನೆಗೆ ಕ್ಯೂಆರ್ ಕೋಡ್ ಬಳಸಿಕೊಂಡು ವೈಯಕ್ತಿಕ ಕಾಮಗಾರಿಗಳಾದ ಕೃಷಿ ಬಾವಿ, ಕೃಷಿಹೊಂಡ, ದನದ ಕೊಟ್ಟಿಗೆ, ಕಂದಕ ಬದು ನಿರ್ಮಾಣ, ಕುರಿ ಶೆಡ್, ಕೋಳಿ ಶೆಡ್, ಹಂದಿ ಶೆಡ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಮೂದಿಸಬಹುದಾಗಿದೆ. ನಂತರ ಎಂಜಿನಿಯರ್ ಸ್ಥಳ ಪರಿಶೀಲಿಸಿ, ಗ್ರಾಮಸಭೆಯಲ್ಲಿ ಅನುಮೋದನೆಯ ಆದ್ಯತೆಯ ಮೇಲೆ ಕ್ರಿಯಾ ಯೋಜನೆಗೆ ಅನುಮೋದನೆಗೆ ಸಲ್ಲಿಸಲಾಗುತ್ತದೆ. ಕಾಮಗಾರಿಗಳ ಬೇಡಿಕೆಗಳನ್ನು ನವೆಂಬರ್ 5ರವರೆಗೆ ಕ್ಯೂ ಆರ್ ಕೋಡ್ ಮೂಲಕ ನಮೂದಿಸಿಕೊಳ್ಳಬಹುದು.
ಮಾಹಿತಿಗೆ https://mgnrega.Karnataka.gov.in ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.