ಮೂಡುಬಿದಿರೆ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಡಯಾಲಿಸಿಸ್ ಯಂತ್ರ ಬಂದು ಎರಡು ವರ್ಷ ಕಳೆದರೂ ಹೊಸ ಯಂತ್ರವನ್ನು ಇನ್ನೂ ಬಾಕ್ಸ್‌ನಿಂದ ಹೊರತೆಗೆದಿಲ್ಲ. ಡಯಾಲಿಸ್ ಯಂತ್ರ ಇದ್ದರೂ ಅದರ ಸೌಲಭ್ಯ ರೋಗಿಗಳಿಗೆ ಸಿಗದಂತಾಗಿದೆ.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎಂಆರ್‌ಪಿಎಲ್‌ನಿಂದ ಡಯಾಲಿಸಿಸ್ ಯಂತ್ರವನ್ನು ಎರಡು ವರ್ಷಗಳ ಹಿಂದೆ ಕೊಡುಗೆಯಾಗಿ ನೀಡಲಾಗಿತ್ತು. ಆದರೆ, ಇದರ ನಿರ್ವಹಣೆಗೆ ಸರ್ಕಾರ ತಾಂತ್ರಿಕ ಸಿಬಂದಿ ನೇಮಕ ಮಾಡದ ಕಾರಣ, ಇದು ಉಪಯೋಗಕ್ಕೆ ಬಾರದೆ, ಯಂತ್ರವು ಪೆಟ್ಟಿಗೆಯಲ್ಲೇ ಉಳಿದಿದೆ.
ಈಗಾಗಲೇ 60ಕ್ಕಿಂತಲೂ ಹೆಚ್ಚಿನ ರೋಗಿಗಳು ಇಲ್ಲಿ ಡಯಾಲಿಸಿಸ್‌ಗಾಗಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಆಗಾಗ್ಗೆ ಬಂದು ವಿಚಾರಿಸುತ್ತಿದ್ದಾರೆ. ಆದರೆ, ವಿಚಾರಣೆಗೆ ಬಂದವರಿಗೆ ಇಲ್ಲಿನ ಸಿಬಂದಿ ತಾಂತ್ರಿಕ ಸಿಬಂದಿ ಇಲ್ಲ ಎಂದು ಹೇಳಿ ವಾಪಾಸ್ ಕಳಿಸುತ್ತಿದ್ದಾರೆ. ಸ್ವಚ್ಛತೆಗೆ ಪ್ರಶಸ್ತಿ ಪಡೆಕೊಂಡಿದ್ದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವು ಆರೋಗ್ಯ ಸೇವೆಗೂ ಹೆಸರಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ವೈದ್ಯರು, ಸಿಬಂದಿ ಹಾಗೂ ಸೌಲಭ್ಯಗಳ ಕೊರತೆಯಿಂದ ಬಡವರಿಗೆ ಸಮರ್ಪಕವಾದ ಆರೋಗ್ಯ ಸೇವೆ ಲಭಿಸುತ್ತಿಲ್ಲ.
ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಸಮಸ್ಯೆ ಪರಿಹಾರಕ್ಕೆ ಈಗಾಗಲೇ ಸಭೆ ನಡೆಸಿ ಮಾಹಿತಿ ಸಂಗ್ರಸಿದ್ದೇನೆ. ಶೀಘ್ರದಲ್ಲೇ ಆರೋಗ್ಯ ಸಚಿವರ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ. ಜನವರಿ ಅಂತ್ಯದೊಳಗೆ ಡಯಾಲಿಸಿಸ್ ಯಂತ್ರ ನಿರ್ವಹಣೆಗೆ ತಾಂತ್ರಿಕ ಸಿಬಂದಿ ಒದಗಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಮ್ಮಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.