ತರೀಕೆರೆ: ‘ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ಧರಿದ್ದೇವೆ’ ಎಂದು ಶಾಸಕ ಜಿ. ಹೆಚ್. ಶ್ರೀನಿವಾಸ್ ಹೇಳಿದರು.
ತರೀಕೆರೆಯಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘1983ರಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅದಾಗಿ ನಾಲ್ಕು ದಶಕಗಳು ಕಳೆದರೂ ಮತ್ತೆ ಇಂತಹ ಕಾರ್ಯಕ್ರಮಗಳು ನಮ್ಮ ಜಿಲ್ಲೆಯಲ್ಲಿ ನಡೆಯದರಿರುವುದು ಬೇಸರದ ಸಂಗತಿ. ಸಾಹಿತ್ಯ ಸಮ್ಮೇಳನ ನಡೆಸುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಜಿಲ್ಲೆಯ ಶಾಸಕರ ನಿಯೋಗ ಹೋಗಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ‘ಜಿಲ್ಲೆಯ ಐವರು ಶಾಸಕರು ಮನಸ್ಸು ಮಾಡಿದರೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವುದು ಕಷ್ಟ ಸಾಧ್ಯವಲ್ಲ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಸಲಹೆಗಾರ ಭಗವಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತರೀಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನವೀನ್ ಪೆನ್ನಯ ಸ್ವಾಗತಿಸಿದರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಲಹೆಗಾರ ಎ. ಸಿ. ಚಂದ್ರಪ್ಪ, ಸಂಚಾಲಕ ರವಿ ದಳವಾಯಿ, ಇಮ್ರಾನ್ ಅಹಮದ್ ಬೇಗ್, ಕೆ. ಎಸ್. ಗುರುವೇಶ್, ಆಗುಂಬೆ ಗಣೇಶ ಹೆಗಡೆ ಹಾಗೂ ನರಸಿಂಹರಾಜಪುರ ವಿನಯ್ ವಿವಿಧ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ಎಚ್ ಸೋಮಶೇಖರ್, ಚಂದ್ರಕಲಾ, ಶಾಂತಕುಮಾರ್, ಸಿಂಗಟಗೆರೆ ಸಿದ್ದಪ್ಪ, ಚಂದ್ರಪ್ಪ, ಶೃಂಗೇರಿ ಸುಬ್ಬಣ್ಣ, ಪೂರ್ಣೇಶ್, ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ಸವಿತಾ ಸತ್ಯನಾರಾಯಣ, ಲತಾ ರಾಜಶೇಖರ್, ಮುಗುಳಿ ಲಕ್ಷ್ಮಿದೇವಮ್ಮ, ಸುನಿತಾ ಕಿರಣ್‍ಕುಮಾರ್, ಪುಷ್ಪಾ, ಎಸ್. ಟಿ ತಿಪ್ಪೇಶಪ್ಪ, ತ.ಮ ದೇವಾನಂದ್, ಕೆ. ಜಯಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.