ADVERTISEMENT

ಆಲ್ದೂರು | ಗ್ರಾಮಸ್ಥರಿಂದ ಹಣ ಸಂಗ್ರಹ: ರಸ್ತೆ ದುರಸ್ತಿ

ಹೆಡದಾಳು ಮಾವಿನಗುಣಿ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಿ

ಜೋಸೆಫ್ ಎಂ.ಆಲ್ದೂರು
Published 6 ನವೆಂಬರ್ 2024, 5:27 IST
Last Updated 6 ನವೆಂಬರ್ 2024, 5:27 IST
ಹದಗೆಟ್ಟ ಹೆಡದಾಳು ಮಾವಿನಗುಣಿ ಸಂಪರ್ಕ ರಸ್ತೆಯನ್ನು ಗ್ರಾಮಸ್ಥರು ದುರಸ್ತಿ ಮಾಡಿದರು
ಹದಗೆಟ್ಟ ಹೆಡದಾಳು ಮಾವಿನಗುಣಿ ಸಂಪರ್ಕ ರಸ್ತೆಯನ್ನು ಗ್ರಾಮಸ್ಥರು ದುರಸ್ತಿ ಮಾಡಿದರು   

ಆಲ್ದೂರು: ಹೊಂಡ–ಗುಂಡಿಗಳಿಂದ ತುಂಬಿದ್ದ ಸಮೀಪದ ಆಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಡದಾಳು ಮಾವಿನಗುಣಿ ಸಂಪರ್ಕ ರಸ್ತೆಯನ್ನು ಗ್ರಾಮಸ್ಥರೇ ಹಣ ಸಂಗ್ರಹಿಸಿ, ದುರಸ್ತಿ ಮಾಡಿದ್ದಾರೆ.

ಗ್ರಾಮದ ಮೂಲಕ ಹಾದು ಹೋಗುವ  ರಸ್ತೆಯು ಒಂದೆಡೆ ವಸ್ತಾರೆಗೆ, ಇನ್ನೊಂದೆಡೆ ತೋರಣ ಮಾವು ಗ್ರಾಮದ ಮೂಲಕ ತಾಲ್ಲೂಕು ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಒಟ್ಟು ಎಂಟು ಹಳ್ಳಿಗಳ ಜನರು ಈ ರಸ್ತೆಯನ್ನು ಅವಲಂಬಿಸಿದ್ದಾರೆ.

ರಸ್ತೆ ಪಕ್ಕದಲ್ಲಿ ಬಾಕ್ಸ್ ಚರಂಡಿ ಇಲ್ಲದ ಕಾರಣ ಮಳೆನೀರು ರಸ್ತೆಯ ಮೇಲೆ ಹರಿದು, ಅರ್ಧ ಕಿ.ಮೀ.ಯಷ್ಟು ರಸ್ತೆ ಹದಗೆಟ್ಟಿದೆ. ಶಾಲೆ ಕಾಲೇಜು ವಿದ್ಯಾರ್ಥಿಗಳು, ಜನರು ಇದೇ ರಸ್ತೆಯಲ್ಲಿ ಸಾಗುತ್ತಾರೆ. ರೋಗಿಗಳನ್ನು ಈ ರಸ್ತೆಯಲ್ಲಿ ಕರೆದೊಯ್ಯಲು ಪ್ರಯಾಸ ಪಡಬೇಕಾಗಿತ್ತು ಎನ್ನುತ್ತಾರೆ ಗ್ರಾಮಸ್ಥರು.

ADVERTISEMENT

ಗ್ರಾಮದ ಲೋಹಿತ್ ಮಾತನಾಡಿ, ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದರಿಂದ ಗ್ರಾಮದ ಮನೆಗಳಿಂದ ಹಣ ಸಂಗ್ರಹಿಸಿ, ಜಲ್ಲಿ ಪುಡಿ, ಮೋರಿ ಕೊಳವೆ ಅಳವಡಿಸಿ ದುರಸ್ತಿ ಮಾಡಲಾಗಿದೆ. 10 ಗಂಟೆಗಳ ಕಾಲ ಕೆಲಸ ಮಾಡಲಾಗಿದೆ ಎಂದರು. 

ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಪಿಕಪ್ ಮತ್ತು ಜೀಪ್ ಮಾತ್ರ ಸಂಚರಿಸಬಹುದು, ಲಘು ವಾಹನ, ದ್ವಿಚಕ್ರ ವಾಹನ ಸಂಚಾರ ಸಾಧ್ಯವಿರಲಿಲ್ಲ ಎಂದು ಗ್ರಾಮದ ಹೆಡದಾಳು ಶಾಮಿಯಾನ ಮಧು, ಅರುಣ್ ಹೇಳಿದರು. 

ಗ್ರಾಮಸ್ಥರಿಂದ ₹1.30 ಲಕ್ಷ ಹಣ ಸಂಗ್ರಹಿಸಿ ರಸ್ತೆ ದುರಸ್ತಿ ಮಾಡಲಾಗಿದೆ ಎಂದು  ಆಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಹೆಡದಾಳು ಹೇಳಿದರು. ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಶಾಸಕರು ಗಮನಹರಿಸಿ, ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡಬೇಕು ಎಂದರು.

ಹದಗೆಟ್ಟ ಹೆಡದಾಳು ಮಾವಿನಗುಣಿ ಸಂಪರ್ಕ ರಸ್ತೆಯನ್ನು ಗ್ರಾಮಸ್ಥರು ದುರಸ್ತಿ ಮಾಡಿದರು
ಹದಗೆಟ್ಟ ಹೆಡದಾಳು ಮಾವಿನಗುಣಿ ಸಂಪರ್ಕ ರಸ್ತೆಯನ್ನು ದುರಸ್ತಿ ಮಾಡುತ್ತಿರುವ ಗ್ರಾಮಸ್ಥರು
ಮೋರಿ ವ್ಯವಸ್ಥೆಗೆ ಸರಿಪಡಿಸಲು ತಂದಿರುವ ಕಾಂಕ್ರೀಟ್ ಪೈಪುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.