ADVERTISEMENT

ರೋಟರಿಯ ಸಮಾಜಮುಖಿ ಕಾರ್ಯ ಎಲ್ಲರಿಗೂ ಮಾದರಿ: ಭೀಮೇಶ್ವರ ಜೋಷಿ

ರೋಟರಿ ಸಮ್ಮಿಲನ-2024 ಕಾರ್ಯಕ್ರಮದಲ್ಲಿ ಜಿ. ಭೀಮೇಶ್ವರ ಜೋಷಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 13:30 IST
Last Updated 25 ಫೆಬ್ರುವರಿ 2024, 13:30 IST
<div class="paragraphs"><p>ಕಳಸದಲ್ಲಿ ಭಾನುವಾರ ನಡೆದ ರೋಟರಿ ಸಮ್ಮಿಲನ-2024 ಕಾರ್ಯಕ್ರಮದಲ್ಲಿ ಜಿ.ಭೀಮೇಶ್ವರ ಜೋಷಿ, ರಾಜಲಕ್ಷ್ಮಿ ಜೋಷಿ, ಸಾವಿತ್ರಿ ಜೋಷಿ, ಬಿ.ಸಿ.ಗೀತಾ, ಕುಮಾರಸ್ವಾಮಿ, ಐವಾನ್ ಡಿಸೋಜ ಭಾಗವಹಿಸಿದ್ದರು</p></div>

ಕಳಸದಲ್ಲಿ ಭಾನುವಾರ ನಡೆದ ರೋಟರಿ ಸಮ್ಮಿಲನ-2024 ಕಾರ್ಯಕ್ರಮದಲ್ಲಿ ಜಿ.ಭೀಮೇಶ್ವರ ಜೋಷಿ, ರಾಜಲಕ್ಷ್ಮಿ ಜೋಷಿ, ಸಾವಿತ್ರಿ ಜೋಷಿ, ಬಿ.ಸಿ.ಗೀತಾ, ಕುಮಾರಸ್ವಾಮಿ, ಐವಾನ್ ಡಿಸೋಜ ಭಾಗವಹಿಸಿದ್ದರು

   

ಕಳಸ: ‘ನಾನು, ನನ್ನ ಏಳಿಗೆ ಆದರೆ ಸಾಲದು. ಸಮುದಾಯದ ಅಭಿವೃದ್ಧಿ ಕೂಡ ಆಗಬೇಕು ಎಂಬುದೇ ರೋಟರಿ ಧ್ಯೇಯ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆ ನಡೆಸುತ್ತಿರುವ ಸಮಾಜಮುಖಿ ಕೆಲಸ ಎಲ್ಲರಿಗೂ ಮಾದರಿ’ ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಜಿ. ಭೀಮೇಶ್ವರ ಜೋಷಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ರೋಟರಿ ಸಮ್ಮಿಲನ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸಮಾಜಮುಖಿಯಾದ ಸಾರ್ಥಕ ಜೀವನ ನಡೆಸುವ ಮೂಲಕ ದೇಶದ ಅಭಿವೃದ್ಧಿ ಕೂಡ ಸಾಧ್ಯ ಎಂಬುದನ್ನು ರೋಟರಿ ನಿರೂಪಿಸಿದೆ ಎಂದರು.

ADVERTISEMENT

ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಮಾತನಾಡಿ, ಮುಂದಿನ ಪೀಳಿಗೆಗೆ ಮೌಲ್ಯಾಧಾರಿತ ಶಿಕ್ಷಣ, ಭೂಸಾರ ಸಂರಕ್ಷಿಸುವ ಕಾರ್ಯಕ್ರಮ ಮತ್ತು ಸುರಕ್ಷತಾ ವಾಹನ ಚಾಲನೆ ಈ ಬಾರಿಯ ರೋಟರಿ ಪ್ರಮುಖ ಕಾರ್ಯಕ್ರಮಗಳು ಎಂದರು.

ರೋಟರಿ ಅಧ್ಯಕ್ಷತೆ ಸಾವಿತ್ರಿ ಜೋಷಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಮುದಾಯ ದಳ ಜಿಲ್ಲಾ ಸಭಾಪತಿಗಳಾದ ಕುಮಾರಸ್ವಾಮಿ, ವಿವಾನ್ ಡಿಸೋಜ, ಸಮ್ಮೇಳನಾಧ್ಯಕ್ಷೆ ರಾಜಲಕ್ಷ್ಮಿ ಜೋಷಿ, ಜಿಲ್ಲಾ ಪ್ರತಿನಿಧಿ ಎಚ್.ಸಿ.ಅಣ್ಣಯ್ಯ, ಹೊರನಾಡು ಘಟಕದ ಅಧ್ಯಕ್ಷ ಡಿ.ಆರ್.ಧರಣೇಂದ್ರ ಭಾಗವಹಿಸಿದ್ದರು.

‘ಜೀವನೋತ್ಸಾಹ ಮತ್ತು ಸೇವೆ’ ಗೋಷ್ಠಿಯಲ್ಲಿ ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ ಉಪನ್ಯಾಸ ನೀಡಿದರು. ‘ಒಳ್ಳೆಯ ವ್ಯಕ್ತಿ ಆಗುವುದು ಹೇಗೆ’ ಎಂಬ ಗೋಷ್ಠಿಯಲ್ಲಿ ಕೆ.ಪಿ. ಪುತ್ತೂರಾಯ ಉಪನ್ಯಾಸ ನೀಡಿದರು. ‘ಪ್ರೇರಣೆ ಮತ್ತು ಸ್ಫೂರ್ತಿ’ ಗೋಷ್ಠಿಯಲ್ಲಿ ಜೇಸಿ ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಭಟ್ ಉಪನ್ಯಾಸ ನೀಡಿದರು. ಕವಿ ಪಟ್ಟಾಭಿರಾಮ್ ಸುಳ್ಯ ನಗೆ ಹನಿಗಳ ಮೂಲಕ ಮನರಂಜಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.